ಧರ್ಮಸ್ಥಳಕ್ಕೆ ಚಿತ್ರ ನಟ ರಾಘವೇಂದ್ರ ರಾಜಕುಮಾರ್ ಭೇಟಿ

ಧರ್ಮಸ್ಥಳಕ್ಕೆ ಚಿತ್ರ ನಟ ರಾಘವೇಂದ್ರ ರಾಜಕುಮಾರ್ ಭೇಟಿ

ಧರ್ಮಸ್ಥಳ: ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಬುಧವಾರ ಚಲನಚಿತ್ರ ನಟ ರಾಘವೇಂದ್ರ ರಾಜಕುಮಾರ್ ಹಾಗೂ ಕುಟುಂಬಸ್ಥರು ಭೇಟಿ ನೀಡಿ ದೇವರ ದರ್ಶನ ಪಡೆದರು.
ಪುತ್ರ ಯುವರಾಜಕುಮಾರ್ ಅವರ ‘ಯುವ’ ಚಲನಚಿತ್ರದ ಚಿತ್ರೀಕರಣ ಮಂಗಳೂರಿನ ಆಸುಪಾಸು ನಡೆಯುತ್ತಿದ್ದು ಈ ಸಂದರ್ಭ ಪತ್ನಿ ಮಂಗಳಾ ಸಮೇತ ದೇವರ ದರ್ಶನಕ್ಕೆ ಆಗಮಿಸಿದ್ದರು.

“35 ವರ್ಷಗಳ ಹಿಂದೆ ತನ್ನ ತಂದೆ ಡಾ.ರಾಜಕುಮಾರ್ ರವರು ತನ್ನ ಮೊದಲ ಚಲನಚಿತ್ರ ಚಿತ್ರೀಕರಣದ ವೇಳೆ ಧರ್ಮಸ್ಥಳಕ್ಕೆ ಕರೆದುಕೊಂಡು ಬಂದು ಶ್ರೀ ದೇವರ ದರ್ಶನ ಮಾಡಿಸಿ ಚಿತ್ರೀಕರಣ ಮುಂದುವರಿಸಿದ್ದರು. ಅದೇ ರೀತಿ ತಾನು ಕೂಡ ತನ್ನ ಪುತ್ರನ ಚಿತ್ರದ ಚಿತ್ರೀಕರಣದ ಸಮಯ, ಆತನನ್ನು ಕರೆದುಕೊಂಡು ಬಂದು ದೇವರ ದರ್ಶನ ಪಡೆದಿದ್ದೇನೆ” ಎಂದು ತಿಳಿಸಿದರು.

“ನೋವು ಸಂತಸಗಳನ್ನು ದೇವರಿಗೆ ಅರ್ಪಿಸಿ ಮುನ್ನಡೆಯಬೇಕು ಎಂದು ಡಾ. ರಾಜಕುಮಾರ್ ಹೇಳುತ್ತಿದ್ದರು. ಸತ್ಯ, ಧರ್ಮ, ನ್ಯಾಯ, ದಾನಗಳಿಗೆ ಹೆಸರಾದ ಶ್ರೀ ಕ್ಷೇತ್ರ ಧರ್ಮಸ್ಥಳದ ಮಂಜುನಾಥ ಸ್ವಾಮಿ ಕಷ್ಟಕಾಲದಲ್ಲಿ ಬೇಡಿ ಬರುವ ಭಕ್ತರ ನೋವುಗಳನ್ನು ದೂರ ಮಾಡುತ್ತಾರೆ. ಇಂತಹ ಅನೇಕ ಸನ್ನಿವೇಶಗಳು ನಮ್ಮ ಕುಟುಂಬಕ್ಕೆ ಬಂದಿದ್ದಾಗ ನಾವು ಇಲ್ಲಿನ ದೇವರಿಗೆ ಪ್ರಾರ್ಥನೆ ಸಲ್ಲಿಸಿ, ಡಾ.ಡಿ.ವೀರೇಂದ್ರ ಹೆಗ್ಗಡೆಯವರ ಮಾರ್ಗದರ್ಶನ ಪಡೆದಿದ್ದೇವೆ. ನಮ್ಮನ್ನು ದೇವರು ಕೈ ಬಿಟ್ಟಿಲ್ಲ” ಎಂದು ರಾಘವೇಂದ್ರ ರಾಜಕುಮಾರ್ ಹೇಳಿದರು.

Leave a Reply

You May Have Missed

error: Content is protected !!