ಪುತ್ರಿಯ ಚಿಕಿತ್ಸೆಗೆ ಹಣ ಹೊಂದಿಸಲಾಗದೆ ನೊಂದು ತಂದೆ ಆತ್ಮಹತ್ಯೆ

ಪುತ್ರಿಯ ಚಿಕಿತ್ಸೆಗೆ ಹಣ ಹೊಂದಿಸಲಾಗದೆ ನೊಂದು ತಂದೆ ಆತ್ಮಹತ್ಯೆ

ಬಂಟ್ವಾಳ: ಪುತ್ರಿಯ ಚಿಕಿತ್ಸೆಗೆ ಹಣ ಹೊಂದಿಸಲು ಸಾಧ್ಯವಾಗುತ್ತಿಲ್ಲ ಎಂದು ಮನನೊಂದು ಕೂಲಿ ಕಾರ್ಮಿಕನೋರ್ವ ಮನೆಯ ಪಕ್ಕದ ಗುಡ್ಡದಲ್ಲಿ ನೇಣು ಬಿಗಿದುಕೊಂಡು ಆತ್ಯಹತ್ಯೆ ಮಾಡಿಕೊಂಡ ಘಟನೆ ಮೇ 18ರಂದು ಬೆಳಕಿಗೆ ಬಂದಿದೆ.
ಶಂಭೂರು ಗ್ರಾಮದ ಮಜಿಬೈಲು ನಿವಾಸಿ ಕೂಲಿ ಕಾರ್ಮಿಕ ಕೃಷ್ಣಪ್ಪ ಮೂಲ್ಯ ಆತ್ಮಹತ್ಯೆ ಮಾಡಿಕೊಂಡವರು.

ಕೃಷ್ಣಪ್ಪ ಮೂಲ್ಯ ಅವರ ಪತ್ನಿ ಯೋಗಿನಿ ಅವರು ತನ್ನ ತಾಯಿ ಮನೆ ಬೇಂಕ್ಯದಲ್ಲಿ ವಾಸವಾಗಿದ್ದು, ಅವರ 2ನೇ ಪುತ್ರಿಗೆ ಅನಾರೋಗ್ಯವಿದ್ದು, ಚಿಕಿತ್ಸೆಗೆ ಹಣವಿಲ್ಲ ಎಂದು ಬೇಸರಿಸಿಕೊಳ್ಳುತ್ತಿದ್ದರು. ಸುರತ್ಕಲ್‌ನಲ್ಲಿ ಕೂಲಿ ಕೆಲಸ ಮಾಡಿಕೊಂಡಿದ್ದ ಕೃಷ್ಣಪ್ಪ ಅವರು ಮೇ 16ರಂದು ಪತ್ನಿಯ ತಾಯಿ ಮನೆಗೆ ತೆರಳಿ ಮರುದಿನ ಸುರತ್ಕಲ್‌ಗೆ ಹೋಗುವುದಾಗಿ ತೆರಳಿದ್ದರು. ಆದರೆ ಅವರು ನೇರವಾಗಿ ಶಂಭೂರಿಗೆ ತೆರಳಿ ಮನೆಯ ಪಕ್ಕದ ಗುಡ್ಡದಲ್ಲಿ ನೇಣು ಬಿಗಿದುಕೊಂಡು ಆತ್ಯಹತ್ಯೆ ಮಾಡಿಕೊಂಡಿದ್ದಾರೆ.

Previous post

ವಿದ್ಯಾರ್ಥಿಯು ಕೇವಲ ನಾಲ್ಕು ಗೋಡೆಗಳ ಮಧ್ಯೆ ಕಲಿತು ವ್ಯಕ್ತಿತ್ವವನ್ನು ಪೂರ್ಣಗೊಳಿಸಿಕೊಳ್ಳಲು ಸಾಧ್ಯವಿಲ್ಲ – ಗಣೇಶ ಕೈಕುರೆ

Next post

ಅನಧಿಕೃತ ಮರಳು ದಕ್ಕೆಯಲ್ಲಿದ್ದ 5 ಟಿಪ್ಪರ್ ಲಾರಿಗಳು ವಶ; ಗಣಿ ಇಲಾಖೆಯ ಕಾರ್ಯಾಚರಣೆ

Leave a Reply

You May Have Missed

error: Content is protected !!