ಬೆಳ್ತಂಗಡಿ: ಶಾಸಕ ಪೂಂಜಾ ವಿರುದ್ದ ಮಹಿಳಾ ಕಾಂಗ್ರೆಸ್ ದೂರು

ಬೆಳ್ತಂಗಡಿ: ಶಾಸಕ ಪೂಂಜಾ ವಿರುದ್ದ ಮಹಿಳಾ ಕಾಂಗ್ರೆಸ್ ದೂರು

ಬೆಳ್ತಂಗಡಿ:ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ವಿವಾದಾತ್ಮಕ ಹೇಳಿಕೆ ವಿರುದ್ದ ಬೆಳ್ತಂಗಡಿಯ ಮಹಿಳಾ ಕಾಂಗ್ರೆಸ್ ಗ್ರಾಮೀಣ ಘಟಕ ಮೇ.24ರ ಬುಧವಾರ ದೂರು ನೀಡಿದೆ.

ಬೆಳ್ತಂಗಡಿಯ ಕಿನ್ಯಮ್ಮ ಯಾನೆ ಗುಣವತಿ ಅಮ್ಮ ಸಭಾಂಗಣದಲ್ಲಿ ಮೇ 22ರಂದು ಬಿಜೆಪಿ ಪಕ್ಷದ ವತಿಯಿಂದ ನಡೆದ ಅಭಿನಂದನ ಕಾರ್ಯಕ್ರಮದ ಭಾಷಣದಲ್ಲಿ ಶಾಸಕ ಪೂಂಜಾ, ಮುಖ್ಯಮಂತ್ರಿ ಸಿದ್ದರಾಮಯ್ಯ 24 ಹಿಂದುಗಳ ಕೊಲೆ ಮಾಡಿದವರೆಂದು ವಿವಾದಾತ್ಮಕ ಹೇಳಿಕೆಯನ್ನು ನೀಡಿದ್ದು. ಇವರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಬೆಳ್ತಂಗಡಿ ಪೋಲಿಸ್ ಠಾಣೆಯಲ್ಲಿ ದೂರು ನೀಡಿದೆ.
ಈ ಸಂದರ್ಭದಲ್ಲಿ ಅಧ್ಯಕ್ಷರಾದ ಶ್ರೀಮತಿ ನಮಿತ ಕೆ ಪೂಜಾರಿ ಉಪಾಧ್ಯಕ್ಷರಾದ ಶ್ರೀಮತಿ ಮಮತಾ, ಪ್ರಧಾನ ಕಾರ್ಯದರ್ಶಿ ಸುಮಂಗಳ ನಾಯ್ಕ್, ಕಾರ್ಯದರ್ಶಿ ಶ್ರೀಮತಿ ಸಿಂಧೂ ಡಿನ್ನಿಸ್, ಶ್ರೀಮತಿ ರೇವತಿ ಉಜಿರೆ ಸದಸ್ಯರಾದ ಕಸ್ತೂರಿ ಪೂಜಾರಿ, ಶ್ರೀಮತಿ ಕುಸುಮ ಮಾಚಾರು ಉಪಸ್ಥಿತರಿದ್ದರು.

Leave a Reply

You May Have Missed

error: Content is protected !!