ಆಲಂಕಾರಿನ ಉದ್ಯಮಿ ಶಾಂತಿಮೊಗರು ಸೇತುವೆಯಿಂದ ಹಾರಿ ಆತ್ಮಹತ್ಯೆ

ಆಲಂಕಾರಿನ ಉದ್ಯಮಿ ಶಾಂತಿಮೊಗರು ಸೇತುವೆಯಿಂದ ಹಾರಿ ಆತ್ಮಹತ್ಯೆ

ಆಲಂಕಾರು: ಆಲಂಕಾರು ಶ್ರೀ ದುರ್ಗಾಂಬಾ ಜನರಲ್ ಸ್ಟೋರ್‌ನ ಮಾಲಕ, ಆಲಂಕಾರು ನಿವಾಸಿ ಚಂದ್ರಶೇಖರ ಪೂಜಾರಿ (60ವ.)ರವರು ಶಾಂತಿಮೊಗರು ಸೇತುವೆಯಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಮೇ 26ರಂದು ಮುಂಜಾನೆ 5 ಗಂಟೆ ವೇಳೆಗೆ ಮನೆಯಲ್ಲಿ ಚೀಟಿ ಬರೆದು ತನ್ನ ಕಾರಿನಲ್ಲಿ ಶಾಂತಿಮೊಗರುಗೆ ಹೋದವರು ಅಲ್ಲಿ ಸೇತುವೆ ಮೇಲೆ ಕಾರು ನಿಲ್ಲಿಸಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ವರದಿಯಾಗಿದೆ.
ಚಂದ್ರಶೇಖರ ಅವರು ಆಲಂಕಾರು ಮೂರ್ತೆದಾರರ ಸೇವಾ ಸಹಕಾರಿ ಸಂಘದ ಮಾಜಿ ಅಧ್ಯಕ್ಷರಾಗಿದ್ದು, ಹಾಲಿ ನಿರ್ದೇಶಕರಾಗಿಯೂ ಸೇವೆ ಸಲ್ಲಿಸುತ್ತಿದ್ದರು. ಶರವೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ, ಆಲಂಕಾರು ಶ್ರೀ ದುರ್ಗಾಂಬಾ ಕಲಾ ಸಂಘದಲ್ಲೂ ಸಕ್ರೀಯರಾಗಿದ್ದರು. ಯಕ್ಷಗಾನ ಅರ್ಥದಾರಿಯೂ ಆಗಿದ್ದರು. ಮೃತರು ಪತ್ನಿ, ಇಬ್ಬರು ಪುತ್ರರನ್ನು ಅಗಲಿದ್ದಾರೆ.

Leave a Reply

You May Have Missed

error: Content is protected !!