ಮನೆಯಿಂದ ಹಾಡಹಗಲೇ ಕಳ್ಳತನ

ಮನೆಯಿಂದ ಹಾಡಹಗಲೇ ಕಳ್ಳತನ

ಪುತ್ತೂರು: ಹಾಡಹಗಲೇ ಮನೆಯಿಂದ ಕಳ್ಳತನ ನಡೆಸಿರುವ ಘಟನೆ ಮೇ.29 ರಂದು ಬನ್ನೂರಿನಲ್ಲಿ ನಡೆದಿದೆ.

ಬನ್ನೂರು ಕುಂಟ್ಯಾನ ಸದಾಶಿವ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯ ಮೌನಿಶ್‌ ಎಂಬವರ ಮನೆಯಲ್ಲಿ ಯಾರೂ ಇಲ್ಲದ ವೇಳೆ ಕಳ್ಳತನ ನಡೆದಿದೆ.
ಮೇ.29ರ ಮಧ್ಯಾಹ್ನ 12 ಗಂಟೆ ಸಮಯಕ್ಕೆ ಮನೆಯವರು ಬಂದಾಗ ಮನೆ ಹಿಂಭಾಗ ಬೀಗ ಮುರಿದು ಕಳ್ಳರು ಒಳಹೊಕ್ಕು ಕಳ್ಳತನ ಮಾಡಿರುವುದು ಗಮನಕ್ಕೆ ಬಂದಿದೆ. ಮನೆಯ ವಸ್ತುಗಳೆಲ್ಲಾ ಚಿಲ್ಲಾಪಿಲ್ಲಿಯಾಗಿ ಬಿದ್ದಿದ್ದು ಪೊಲೀಸರಿಗೆ ದೂರು ನೀಡಲಾಗಿದೆ. ಬೆರಳಚ್ಚು ತಜ್ಞರು ಮತ್ತು ಶ್ವಾನದಳ ಘಟನಾ ಸ್ಥಳಕ್ಕೆ ಆಗಮಿಸಿದ್ದು ತನಿಖೆ ನಡೆಯುತ್ತಿದೆ.

Leave a Reply

You May Have Missed

error: Content is protected !!