ಬೆಳ್ತಂಗಡಿ : ವಿದ್ಯುತ್ ತಂತಿ ಕುತ್ತಿಗೆಗೆ ಸಿಲುಕಿ ವ್ಯಕ್ತಿ ಸ್ಥಳದಲ್ಲೇ ಸಾವು


ನೇಸರ ಜ.07:ಬೆಳ್ತಂಗಡಿ ತಾಲೂಕಿನ ಮುಂಡಾಜೆ ಕಾಜೂರು ದಿಡುಪೆ ಸಂಸೆ ರಸ್ತೆಯ ಹೇಡ್ಯ ಸೊಸೈಟಿನ ಬಳಿ ರಾತ್ರಿ 11 ಗಂಟೆ ಸುಮಾರಿಗೆ ರಸ್ತೆ ಅಪಘಾತದಲ್ಲಿ ಕೊಯ್ಯೂರು ನಿವಾಸಿ ರಘು ಎಂಬವರು ಮೃತ ಪಟ್ಟಿದ್ದಾರೆ.
ಬೈಹುಲ್ಲು ಸಾಗಾಟದ ಪಿಕ್ ಅಪ್ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಪರಿಣಾಮ ನಾಲ್ಕೈದು ವಿದ್ಯುತ್ ಕಂಬಗಳು ತುಂಡಾಗಿ ತಂತಿಗಳು ರಸ್ತೆಯಲ್ಲಿ ಚೆಲ್ಲಾಪಿಲ್ಲಿಯಾಗಿತ್ತು.ಈ ವೇಳೆ ಸ್ಕೂಟರ್ ನಲ್ಲಿ ದಿಡುಪೆ ಕಡೆಯಿಂದ ಬರುತ್ತಿದ್ದ ಉಜಿರೆ ಕಾಲೇಜು ರಸ್ತೆಯ ಹೋಟೆಲ್ ಮಂಜುನಾಥ್ ನ ರಘು ಅವರ ಕುತ್ತಿಗೆಗೆ ತಂತಿಗಳು ಸಿಕ್ಕಿಕೊಂಡು ರಸ್ತೆಗೆಸೆಯಲ್ಪಟ್ಟ ಅವರು ಕೊನೆಯುಸಿರೆಳೆದಿದ್ದಾರೆ ಎಂದು ವರದಿಯಾಗಿದೆ.














Leave a Reply