ಅರಂಬೂರು: ಗುಜರಿ ತುಂಬಿದ್ದ ಲಾರಿಯಲ್ಲಿ ಬೆಂಕಿ ಅವಘಡ

ಅರಂಬೂರು: ಗುಜರಿ ತುಂಬಿದ್ದ ಲಾರಿಯಲ್ಲಿ ಬೆಂಕಿ ಅವಘಡ

ಅರಂತೋಡು: ಆಲೆಟ್ಟಿ ಗ್ರಾಮದ ಅರಂಬೂರು ಸಮೀಪ ಗುಜರಿ ಸೊತ್ತುಗಳನ್ನು ತುಂಬಿದ ಲಾರಿಯೊಂದಕ್ಕೆ ಬೆಂಕಿ ಅವಘಡ ಸಂಭವಿಸಿದ್ದು, ಅಗ್ನಿಶಾಮಕ ದಳದವರು ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸಿದ್ದಾರೆ.

ಸುಳ್ಯದಿಂದ ಗುಜರಿ ಸೊತ್ತು ತುಂಬಿಸಿಕೊಂಡು ಮೈಸೂರಿಗೆ ತೆರಳುತ್ತಿದ್ದ ಲಾರಿ ಅರಂಬೂರು ಸಮೀಪಿಸುತ್ತಿದ್ದಂತೆ ಬೆಂಕಿ ಕಾಣಿಸತೊಡಗಿದೆ. ಇದನ್ನು ಕಂಡ ಲಾರಿ ಚಾಲಕ ವಾಹನವನ್ನು ಅರಂಬೂರು ಸಮೀಪವಿರುವ ಸರ್ವಿಸ್‌ ಸ್ಟೇಷನ್‌ ಒಳಭಾಗಕ್ಕೆ ಕೊಂಡೊಯ್ದು ನೀರು ಹಾಯಿಸಿ ಬೆಂಕಿ ನಂದಿಸಲು ಪ್ರಯತ್ನಿಸಿದ್ದರು. ಬಳಿಕ ಅಗ್ನಿಶಾಮಕ ದಳದವರಿಗೆ ಮಾಹಿತಿ ನೀಡಿದ್ದು, ಅವರು ಆಗಮಿಸಿ ಬೆಂಕಿ ನಂದಿಸುವಲ್ಲಿ ಸಫ‌ಲರಾಗಿದ್ದಾರೆ.

Leave a Reply

You May Have Missed

error: Content is protected !!