ಕೆಎಸ್ಆರ್ ಟಿಸಿ ಬಸ್ಸಿನಿಂದ ಬಿದ್ದು ಚಿಕಿತ್ಸೆ ಪಡೆಯುತ್ತಿದ್ದ ಮಹಿಳೆ ಮೃತ್ಯು

ಕೆಎಸ್ಆರ್ ಟಿಸಿ ಬಸ್ಸಿನಿಂದ ಬಿದ್ದು ಚಿಕಿತ್ಸೆ ಪಡೆಯುತ್ತಿದ್ದ ಮಹಿಳೆ ಮೃತ್ಯು

ಆಲಂಕಾರು: ಆಲಂಕಾರು ಎಂಬಲ್ಲಿ ಮೇ.25ರಂದು ಚಲಿಸುತ್ತಿದ್ದ ಕೆ ಎಸ್ ಆರ್ ಟಿ ಸಿ ಬಸ್ಸಿನಿಂದ ಬಿದ್ದು ಗಾಯಗೊಂಡಿದ್ದ ಮಹಿಳೆ ಚಿಕಿತ್ಸೆ ಫಲಕಾರಿಯಾಗದೆ ಮೇ.29ರಂದು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.

ಗೋಳಿತ್ತಡಿ ಶಾರದಾ ನಗರದ ಗುಲಾಬಿ ಎಂಬ ಮಹಿಳೆ ಚಲಿಸುತ್ತಿದ್ದ ಬಸ್ಸಿನಿಂದ ಆಲಂಕಾರು ಎಂಬಲ್ಲಿ ಮಾರ್ಗಕ್ಕೆ ಬಿದ್ದು ಮೇ.25ರಂದು ತಲೆಗೆ ಗಾಯವಾಗಿತ್ತು. ತಕ್ಷಣ ಅವರಿಗೆ ಸ್ಥಳೀಯ ಕ್ಲಿನಿಕ್‌ ನಲ್ಲಿ ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಮೇ.29ರಂದು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.

Leave a Reply

You May Have Missed

error: Content is protected !!