ಕಡಬ: ವಿದ್ಯುತ್ ಕಂಬವೇರಿದ್ದ ಲೈನ್ ಮ್ಯಾನ್ ಗೆ ವಿದ್ಯುತ್ ಆಘಾತ; ಮೃತ್ಯು

ಕಡಬ: ವಿದ್ಯುತ್ ಕಂಬವೇರಿದ್ದ ಲೈನ್ ಮ್ಯಾನ್ ಗೆ ವಿದ್ಯುತ್ ಆಘಾತ; ಮೃತ್ಯು

ಕಡಬ: ವಿದ್ಯುತ್ ಕಂಬವೇರಿದ್ದ ಲೈನ್ ಮ್ಯಾನ್ ಓರ್ವರು ವಿದ್ಯುತ್ ಆಘಾತಕ್ಕೊಳಗಾಗಿ ಮೃತಪಟ್ಟ ಘಟನೆ ಜೂನ.1ರ ಗುರುವಾರದಂದು ಕಡಬದಲ್ಲಿ ನಡೆದಿದೆ.

ಕಡಬ ಮೆಸ್ಕಾಂ ಲೈನ್ ಮ್ಯಾನ್, ಬಾಗಲಕೋಟೆ ಮೂಲದ ದ್ಯಾಮಣ್ಣ ಮೃತಪಟ್ಟವರು.

ಕಡಬದ ಮುಳಿಮಜಲು ಸಮೀಪದ ಕಾಯರಡ್ಕ ಎಂಬಲ್ಲಿ ವಿದ್ಯುತ್ ಪೂರೈಕೆಯಲ್ಲಿ ಸಮಸ್ಯೆ ಕಂಡು ಕಂಬವೇರಿದ್ದ ಲೈನ್ ಮ್ಯಾನ್ ಗೆ ವಿದ್ಯುತ್ ಶಾಕ್ ಹೊಡೆದ ಪರಿಣಾಮ ಗಂಭೀರ ಗಾಯಗೊಂಡ ಅವರನ್ನು ಕಡಬ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಪುತ್ತೂರಿಗೆ ಕರೆದೊಯ್ಯಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.

Leave a Reply

You May Have Missed

error: Content is protected !!