ಎರಡು ಕಾರುಗಳ ನಡುವೆ ಮುಖಾಮುಖಿ ಢಿಕ್ಕಿ



ಬಂಟ್ವಾಳ: ಎರಡು ಕಾರುಗಳು ಮುಖಾಮುಖಿ ಢಿಕ್ಕಿಯಾಗಿ ಕಾರು ಚಾಲಕರಿಬ್ಬರು ಅಲ್ಪಸ್ವಲ್ಪ ಗಾಯಗಳೊಂದಿಗೆ ಅಪಾಯವಿಲ್ಲದೆ ಪಾರಾದ ಘಟನೆ ಬಂಟ್ವಾಳ ಸಂಚಾರಿ ಠಾಣಾ ವ್ಯಾಪ್ತಿಯ ಬೆಂಕ್ಯ ಎಂಬಲ್ಲಿ ನಡೆದಿದೆ.

ಕಾರು ಚಾಲಕರಾದ ಆದರ್ಶ ಮತ್ತು ಸಂಕಪ್ಪ ಅವರು ಗಾಯಗೊಂಡವರು. ಮುಡಿಪು ಮತ್ತು ಮೆಲ್ಕಾರ್ ಕಡೆಯಿಂದ ಬರುತ್ತಿದ್ದ ಕಾರುಗಳ ಮಧ್ಯೆ ಸಜೀಪ ಮೂಡ ಗ್ರಾಮದ ಬೇಂಕ್ಯ ಬ್ರಹ್ಮಶ್ರೀ ನಾರಾಯಣ ಗುರು ಮಂದಿರದ ಸಮೀಪ ಮುಖಾಮುಖಿ ಢಿಕ್ಕಿ ಸಂಭವಿಸಿದೆ.
ಢಿಕ್ಕಿಯಾದ ರಭಸಕ್ಕೆ ಎರಡು ಕಾರುಗಳು ಜಖಂಗೊಂಡಿವೆ.
ಮೆಲ್ಕಾರ್ ಸಂಚಾರಿ ಠಾಣಾ ಪೋಲೀಸರು ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
















Leave a Reply