“ಶಿಶಿಲ ಸೀಮೆಯ ಚಿತ್ಪಾವನ ಜನಾಂಗದ ನೆಕ್ಕರಡ್ಕ ವಾಳ್ಯದ ಹೆಬ್ಬಾರ್ ಗೋಖಲೆ ಮನೆತನ” ಪುಸ್ತಕ ಬಿಡುಗಡೆ

“ಶಿಶಿಲ ಸೀಮೆಯ ಚಿತ್ಪಾವನ ಜನಾಂಗದ ನೆಕ್ಕರಡ್ಕ ವಾಳ್ಯದ ಹೆಬ್ಬಾರ್ ಗೋಖಲೆ ಮನೆತನ” ಪುಸ್ತಕ ಬಿಡುಗಡೆ

ಉಜಿರೆ : “ಶಿಶಿಲ ಸೀಮೆಯ ಚಿತ್ಪಾವನ ಜನಾಂಗದ ನೆಕ್ಕರಡ್ಕ ವಾಳ್ಯದ ಹೆಬ್ಬಾರ್ ಗೋಖಲೆ ಮನೆತನ” ಎಂಬ ಪುಸ್ತಕ ಬಿಡುಗಡೆ ಕಾರ್ಯಕ್ರಮ ಜೂ.4ರಂದು ಉಜಿರೆ ಪ್ರಭಾಕರ ಹೆಬ್ಬಾರ್ ಅವರ ನಿವಾಸ ಪಾಂಚಜನ್ಯ ದಲ್ಲಿ ನಡೆಯಿತು.

ಸರಕಾರಿ ಪ್ರೌಢ ಶಾಲೆಯ ಮುಖ್ಯೋಪಾಧ್ಯಾಯರಾದ ವೆಂಕಟೇಶ್ ತುಳುಪುಳೆ ಅವರು ಪುಸ್ತಕವನ್ನು ಬಿಡುಗಡೆ ಮಾಡಿ ಶುಭಹಾರೈಸಿದರು.
ಬೆಳ್ತಂಗಡಿ ಚಿತ್ಪಾವನ ಸಮಾಜದ ಅಧ್ಯಕ್ಷರಾದ ತ್ರಿವಿಕ್ರಮ ಕೇಳ್ಕರ್ ಇವರ ಮುಖ್ಯ ಅತಿಥಿ ಗಳಾಗಿ ಭಾಗವಹಿಸಿದರು.ಪುಸ್ತಕದ ಸಂಪಾದಕರು ಮತ್ತು ನಿವೃತ್ತ ಶಿಕ್ಷಕರಾದ ಪೇರಡೇಲು ಗೋವಿಂದ ದಾಮಲೆ ಇವರು ಮಾತನಾಡಿ ಕುಟುಂಬಗಳ ದಾಖಲಾತಿಯ ಮಹತ್ವ ತಿಳಿಸಿದರು.

ಗೋಖಲೆ ಕುಟುಂಬದ ಹಿರಿಯರಾದ ಮಣ್ಣಾಪಾಪು ರಮೇಶ್ ಹೆಬ್ಬಾರ್ ಗೋಖಲೆ ಇವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಶ್ರೀಮತಿ ವಿಶಾಖ ಗೋಖಲೆ, ಶ್ರೀಮತಿ ದೀಪಿಕಾ ಗೋಖಲೆ ಮತ್ತು ವಿಭಾ ಕೇಳ್ಕರ್ ಇವರು ಪ್ರಾರ್ಥಸಿದರು. ಪ್ರಭಾಕರ್ ಗೋಖಲೆ ಸ್ವಾಗತಿಸಿ, ಮಹಾದೇವ ಹೆಬ್ಬಾರ್ ಪ್ರಾಸ್ತವಿಕ ನುಡಿಗಳನ್ನು ಆಡಿದರು, ಶ್ರೀವತ್ಸ ಗೋಖಲೆ ವಂದಿಸಿದರು, ಕಿರಣ್ ಗೋಖಲೆ ಕಾರ್ಯಕ್ರಮ ನಿರೂಪಿಸಿದರು

Leave a Reply

You May Have Missed

error: Content is protected !!