ಕೊಕ್ಕಡ: ಎಸ್ ಎಸ್ ಎಲ್ ಸಿ ವಿದ್ಯಾರ್ಥಿನಿ ವಿಷ ಸೇವಿಸಿ ಆತ್ಮಹತ್ಯೆ

ಕೊಕ್ಕಡ: ಎಸ್ ಎಸ್ ಎಲ್ ಸಿ ವಿದ್ಯಾರ್ಥಿನಿ ವಿಷ ಸೇವಿಸಿ ಆತ್ಮಹತ್ಯೆ

ಕೊಕ್ಕಡ: ಎಸ್ ಎಸ್ ಎಲ್ ಸಿ ವಿದ್ಯಾರ್ಥಿನಿಯೋರ್ವಳು ಪುತ್ತೂರಿನಲ್ಲಿರುವ ಹಾಸ್ಟೇಲ್ ಒಂದರಲ್ಲಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.

ಈಕೆ ಕೊಕ್ಕಡ ಗ್ರಾಮದ ನೇತ್ರಾಳ ನಿವಾಸಿ ಶ್ರೀಧರ ಆಚಾರ್ಯ ಹಾಗೂ ದಿ.ಪುಷ್ಪ ದಂಪತಿ ಪುತ್ರಿ ರೇಖಾ(15) ಆತ್ಮಹತ್ಯೆ ಮಾಡಿಕೊಂಡವರು.
ಈಕೆಯ ತಾಯಿ ಪುಷ್ಪ ಅವರು ವರ್ಷದ ಹಿಂದೆ ಜ್ವರದಿಂದ ಬಳಲಿ ಮೃತರಾದರು. ತಂದೆ ಕೂಲಿ ಕೆಲಸ ಮಾಡುತ್ತಿದ್ದು, ತಾಯಿಯ ನಿಧನದ ಬಳಿಕ ಮಾನಸಿಕವಾಗಿ ಕುಗ್ಗಿದ್ದಳು. ಅಲ್ಲದೆ ಆಕೆ ತಮ್ಮ ಸಂಬಂಧಿಕರ ಮನೆಯಿಂದ ಶಾಲೆ ಹೋಗುತ್ತಿದ್ದಳು. ಕೊಕ್ಕಡ ಪ್ರೌಢಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದ ಆಕೆಯನ್ನು ಅತ್ತೆ ಒತ್ತಾಯದ ಮೇರೆಗೆ ಪುತ್ತೂರಿನ ಹಾಸ್ಟೆಲ್‌ಗೆ ಸೇರಿಸಿ ಓದುವಂತೆ ಹೇಳುತ್ತಿದ್ದರು. ಆರಂಭದಲ್ಲಿ ಹಾಸ್ಟೆಲ್‌ಗೆ ಹೋಗಲು ನಿರಾಕರಿಸಿದ ಆಕೆ ಬಳಿಕ ಅತ್ತೆ ಒತ್ತಾಯದ ಮೇರೆಗೆ ಹಾಸ್ಟೆಲ್ ಸೇರಲು ಒಪ್ಪಿದ್ದಳು.
ಹಾಸ್ಟೆಲ್ ಬೇಡ, ಇಂಗ್ಲೀಷ್ ಕಷ್ಟದ ವಿಷಯ ಎಂದು ಆಗಾಗ ಹೇಳುತ್ತಿದ್ದಳು. ಕೊಕ್ಕಡ ಶಾಲೆಯಲ್ಲಿರುವಾಗ ಗೆಳತಿಯರೊಂದಿಗೆ ಉತ್ತಮವಾಗಿ ಬೆರೆತು ಕಲಿಕೆಯಲ್ಲಿ ಆಸಕ್ತಿ ಹೊಂದಿದ್ದಳು.

Leave a Reply

You May Have Missed

error: Content is protected !!