ಪಿಕಪ್ ಗೆ ಗುದ್ದಿದ ಸ್ಕೂಟಿ; ವಿಡಿಯೋ ವೈರಲ್


ಅರಂತೋಡು: ಸ್ಕೂಟಿಯೊಂದು ಪಿಕಪ್ ಗೆ ಗುದ್ದಿದ ಘಟನೆ ಸುಳ್ಯ ತಾಲೂಕಿನ ಕಲ್ಲುಗುಂಡಿಯ ಮಧ್ಯಪೇಟೆಯಲ್ಲಿ ಸಂಭವಿಸಿದೆ. ಅಪಘಾತದ ರಭಸಕ್ಕೆ ಸ್ಕೂಟಿ ನಜ್ಜುಗುಜ್ಜಾಗಿದೆ.

ಸ್ಕೂಟಿ ಸವಾರ ಪವಾಡ ಸದೃಶವಾಗಿ ಪಾರಾಗಿದ್ದಾನೆ. ಸ್ಕೂಟಿ ಪಿಕಪ್ ಗೆ ಡಿಕ್ಕಿ ಹೊಡೆದಿದ್ದು, ಪಿಕಪ್ ಚಾಲಕನ ಸಮಯ ಪ್ರಜ್ಞೆಯಿಂದ ಭಾರಿ ದೊಡ್ಡ ಅಪಘಡ ತಪ್ಪಿದಂತಾಗಿದೆ. ಘಟನೆಯಲ್ಲಿ ಸ್ಕೂಟಿ ಸವಾರನ ನಿರ್ಲಕ್ಷ್ಯದಿಂದ ಅಪಘಾತ ಸಂಭವಿಸಿದೆ ಎನ್ನಲಾಗಿದೆ.
ಸ್ಥಳಕ್ಕೆ ಕಲ್ಲುಗುಂಡಿ ಪೊಲೀಸರು ಆಗಮಿಸಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ. ಅಪಘಾತ ದೃಶ್ಯ ಸಿಸಿ ಕೆಮಾರದಲ್ಲಿ ಸೆರೆಯಾಗಿದ್ದು ವ್ಯಾಪಕ ವೈರಲ್ ಆಗುತ್ತಿದೆ.
















Leave a Reply