ಶಿಶಿಲ ಪಂಚಾಯತ್‍ನಲ್ಲಿ ಕರ್ನಾಟಕ ಸರಕಾರದ ಕಾರ್ಮಿಕ ಇಲಾಖೆಯ ಸುರಕ್ಷ ಕಿಟ್ಟ್ ವಿತರಣೆ

ಶಿಶಿಲ ಪಂಚಾಯತ್‍ನಲ್ಲಿ ಕರ್ನಾಟಕ ಸರಕಾರದ ಕಾರ್ಮಿಕ ಇಲಾಖೆಯ ಸುರಕ್ಷ ಕಿಟ್ಟ್ ವಿತರಣೆ

ನೇಸರ 19: ಶಿಶಿಲ ಪಂಚಾಯತ್‍ನಲ್ಲಿ ಕರ್ನಾಟಕ ಸರಕಾರದ ಕಾರ್ಮಿಕ ಇಲಾಖೆಯ ಸುರಕ್ಷ ಕಿಟ್ಟ್ ವಿತರಣೆಯನ್ನು ಪಂಚಾಯತ್ ಸಭಾಭವನದಲ್ಲಿ ವಿತರಿಸಲಾಯಿತು ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪಂಚಾಯತ್ ಅಧ್ಯಕ್ಷರಾದ ಸಂದೀಪ್ ಗೌಡ ಇವರು ವಹಿಸಿದ್ದರು. ಭಾರತೀಯ ಮದ್ದೂರ್ ಸಂಘ ಗ್ರಾಮ ಸಮಿತಿ ಅಧ್ಯಕ್ಷರಾದ ಸುಬ್ಬಣ್ಣನವರು ಕಾರ್ಮಿಕರಿಗೆ ಸರಕಾರದಿಂದ ಬರುವಂತಹ ಯೋಜನೆಗಳ ಮಾಹಿತಿಯನ್ನು ನೀಡಿದರು. ಕಾರ್ಯಕ್ರಮದಲ್ಲಿ ಉಪಾಧ್ಯಕ್ಷರಾದ ವಿಮಲಾ, ಪಂಚಾಯತ್ ಸದಸ್ಯರಾದ ಸುಧಿನ್, ಯಶೋಧರ ಕೆ.ವಿ, ಶ್ರೀಮತಿ ಲಲಿತಾ, ಶ್ರೀಮತಿ ಕಮಲಾಕ್ಷಿ ಮೊದಲಾದವರು ಉಪಸ್ಥಿತರಿದ್ದರು.

Leave a Reply

You May Have Missed

error: Content is protected !!