ನೆಲ್ಯಾಡಿ ಜ್ಞಾನೋದಯ ಬೆಥನಿ ವಿದ್ಯಾಸಂಸ್ಥೆಯ ವಿದ್ಯಾರ್ಥಿ ಸಂಸತ್ತಿನ ಪದಗ್ರಹಣ


ನೆಲ್ಯಾಡಿ ಜ್ಞಾನೋದಯ ಬೆಥನಿ ವಿದ್ಯಾಸಂಸ್ಥೆಯ ವಿದ್ಯಾರ್ಥಿ ಸಂಸತ್ತಿನ ಪದಗ್ರಹಣ ಜೂ.27ರಂದು ಸಂಸ್ಥೆಯ ಪ್ರಾಂಶುಪಾಲರಾದ ರೆ.ಫಾ.ಥಾಮಸ್ ಬಿಜಿಲಿ ಅವರ ನೇತೃತ್ವದಲ್ಲಿ ನಡೆಯಿತು.

ಮಕ್ಕಳಲ್ಲಿ ನಾಯಕತ್ವ ಗುಣವನ್ನು ಬೆಳೆಸುವ ಪ್ರಜಾಪ್ರಭುತ್ವ ಮಾದರಿಯ ಶಾಲಾ ಸರಕಾರ ಅಸ್ತಿತ್ವಕ್ಕೆ ತರುವುದು ಕಾರ್ಯಕ್ರಮದ ಉದ್ದೇಶವಾಗಿತ್ತು. ಈ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಉಪ್ಪಿನಂಗಡಿ ಆರಕ್ಷಕ ಠಾಣೆಯ ಸಬ್ ಇನ್ಸ್ಪೆಕ್ಟರ್ ರವಿಕುಮಾರ್ ಬಿ.ಎಸ್ ಅವರು ಭಾಗವಹಿಸಿ ಚುನಾಯಿತ ನಾಯಕರಿಗೆ ಅಧಿಕಾರ ಸಂಕೇತವಾದ ಶಾಲನ್ನು ನೀಡುವುದರ ಮುಖಾಂತರ ವಿದ್ಯಾರ್ಥಿಗಳಿಗೆ ಅಧಿಕಾರವನ್ನು ಹಸ್ತಾಂತರಿಸಿ ಮಾತನಾಡಿದ ಅವರು ಪ್ರಜಾಪ್ರಭುತ್ವ ಸರಕಾರವು ಉತ್ತಮ ನಾಯಕರನ್ನು ಬೆಳೆಸುವ ನಾಯಕತ್ವ ಗುಣವುಳ್ಳ ಬಾವಿ ಪ್ರಜೆಗಳನ್ನು ಬೆಳೆಸುವ ಸಂಕೇತವಾಗಿದೆ, ಈ ನಿಟ್ಟಿನಲ್ಲಿ ಬೆಥನಿ ಸಂಸ್ಥೆಯು ಉತ್ತಮ ನಾಯಕರನ್ನು ಬೆಳೆಸುವುದರ ಜೊತೆಗೆ ವಿದ್ಯಾರ್ಥಿಗಳಲ್ಲಿ ಉತ್ತಮ ಶಿಸ್ತನ್ನು ಮೂಡಿಸುತ್ತಿದೆ ಎಂದು ಹೇಳಿದರು. ನಾಯಕತ್ವ ಗುಣ ಎಂದರೆ ಇತರರಿಗೆ ಸಹಾಯ ಮಾಡಿ ಸಾಮಾಜಿಕ ಪಿಡುಗುಗಳನ್ನು ತೊಲಗಿಸೋದು ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಉತ್ತಮ ನಾಯಕತ್ವವನ್ನು ಪ್ರದರ್ಶಿಸಬೇಕು ಎಂದು ಮಕ್ಕಳಿಗೆ ಕಿವಿ ಮಾತನ್ನು ಹೇಳಿದರು.

ಶಾಲಾ ನಾಯಕ ಮಿಲ್ಜಿತ್ ಜಾನ್ಸನ್ ಇತರ ಸಂಸತ್ತಿನ ಸದಸ್ಯರಾದ ಅಕ್ಷಯ್ ಪ್ರಿನ್ಸ್, ಆಲ್ಬಿನ್ ಜೋನ್, ಶಾರೋನ್ ರೋಯಿ, ಎಸ್ ಎಮ್ ಸಾರ್ಥಕ್, ಜಿಷ್ಮಾ ಜಾನ್, ಆಶಿಶ್ ಬೋಸ್, ಫಾತಿಮತ್ ಫಿದಾ, ಅನ್ಸಲೀನಾ ಹಾಗೂ ಇತರ ಉಪಮಂತ್ರಿಗಳು ಅಧಿಕಾರವನ್ನು ಸ್ವೀಕರಿಸಿದರು.

ವೇದಿಕೆಯಲ್ಲಿ ಸಂಸ್ಥೆಯ ಮುಖ್ಯಸ್ಥರಾದ ಫಾ.ಬಿಜಿಲಿ ತೋಮಸ್ ಓ ಐ ಸಿ, ಉಪ ಪ್ರಾಂಶುಪಾಲರಾದ ಜೋಸ್ ಎಂ ಜೆ, ಪಿಯುಸಿ ವಿಭಾಗದ ಮುಖ್ಯಸ್ಥರಾದ ಸುಶೀಲ್ ಕುಮಾರ್, ಪ್ರೌಢಶಾಲಾ ವಿಭಾಗದ ಮುಖ್ಯಸ್ಥರಾದ ಜಾರ್ಜ್ ಕೆ ತೋಮಸ್, ಕೋಶಾಧಿಕಾರಿಯದ ಫಾ.ಜೈಸನ್ ಸೈಮನ್, ಇಂಗ್ಲೀಷ್ ವಿಭಾಗದ ಮುಖ್ಯಸ್ಥರಾದ ಫಾ.ಜೇಮ್ಸ್ ರವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಮುಖ್ಯ ಅತಿಥಿಗಳಿಗೆ ಸಂಸ್ಥೆಯ ಕೋಶಾಧಿಕಾರಿಯದ ರೆ.ಫಾ.ಜೈಸನ್ ಸೈಮನ್ ರವರು ಸ್ಮರಣಿಕೆಯನ್ನು ನೀಡಿ ಗೌರವಿಸಿದರು.
ಕುಮಾರಿ ಲಿಯಾ ಕಾರ್ಯಕ್ರಮ ನಿರೂಪಿಸಿದರು. ಭಾವನ ವಂದಿಸಿದರು.

















Leave a Reply