ನೆಲ್ಯಾಡಿ ಜೇಸಿಐ ವತಿಯಿಂದ LAV (Lo assistance Vist) ಕಾರ್ಯಕ್ರಮ

ನೆಲ್ಯಾಡಿ ಜೇಸಿಐ ವತಿಯಿಂದ LAV (Lo assistance Vist) ಕಾರ್ಯಕ್ರಮ

ನೆಲ್ಯಾಡಿ: ಜೇಸಿಐ ವತಿಯಿಂದ LAV (Lo assistance Vist) ಕಾರ್ಯಕ್ರಮ ಜೂ.29ರಂದು ನೆಲ್ಯಾಡಿ ಐ ಐ ಸಿ ಟಿ ವಿದ್ಯಾ ಸಂಸ್ಥೆಯಲ್ಲಿ ನಡೆಯಿತು.

ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಜೇಸಿಐ ನ ವಲಯ ಉಪಾಧ್ಯಕ್ಷರಾದ ಜೆ ಎಫ್ ಎಮ್ ದೇವರಾಜ್ ಕುದ್ಪಾಜೆ ಆಗಮಿಸಿ ವಲಯದಲ್ಲಿ ಮುಂದೆ ನಡೆಯಲಿರುವ ಕಾರ್ಯಕ್ರಮಗಳ ಬಗ್ಗೆ, ಘಟಕಾಧ್ಯಕ್ಷರು ಮುಂದಿನ ದಿನಗಳಲ್ಲಿ ಮಾಡಬೇಕಾದ ಕೆಲಸ ಕಾರ್ಯಗಳ ಬಗ್ಗೆ ಹಾಗೂ ನೆಲ್ಯಾಡಿ ಘಟಕದವರು ಮಾಡಿದ ಕಾರ್ಯಕ್ರಮಗಳ ಬಗ್ಗೆ ಮೆಚ್ಚಿಗೆ ವ್ಯಕ್ತಪಡಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ನೆಲ್ಯಾಡಿ ಜೇಸಿಐ ನ ದಯಾಕರ ರೈ ಕೆ. ಎಮ್ ವಹಿಸಿ ಎಲ್ಲರನ್ನು ಸ್ವಾಗತಿಸಿದರು.

ಜೇಜೇಸಿಯ ಅಧ್ಯಕ್ಷರಾದ ಗೌರವ್ ಜೇಸಿವಾಣಿ ವಾಚಿಸಿದರು. ರವೀಂದ್ರ. ಟಿ ವಲಯ ಉಪಾಧ್ಯಕ್ಷರಿಗೆ ಶಾಲು ಹಾಕಿ ಗೌರವಿಸಿದರು. ಕಾರ್ಯದರ್ಶಿ ಜೇಸಿ. ಸುಚಿತ್ರ ಬಂಟ್ರಿಯಲ್ ವಂದಿಸಿದರು.
ಕಾರ್ಯಕ್ರಮದಲ್ಲಿ ನಿಕಟಪೂರ್ವ ಅಧ್ಯಕ್ಷರಾದ ಜಯಂತಿ ಬಿ ಎಂ, ಜೇಸಿಐ ನ ಎಲ್ಲಾ ಪದಾಧಿಕಾರಿಗಳು ಹಾಗೂ ಸದಸ್ಯರು, ಸುಳ್ಯ ಪಯಸ್ವಿನಿ ಜೇಸಿಐ ಕಾರ್ಯದರ್ಶಿ ಸುರೇಶ್ ಕಾಮತ್, ನೆಲ್ಯಾಡಿ ಸೀನಿಯರ್ ಚೇಂಬರ್ ಅಧ್ಯಕ್ಷರಾದ ನಾರಾಯಣ ಬಲ್ಯ, ರಾಷ್ಟ್ರೀಯ ಸೀನಿಯರ್ ಚೇಂಬರ್ ನ ಅಧಿಕಾರಿಗಳಾದ ಡಾ. ಸದಾನಂದ ಕುಂದರ್ ಉಪಸ್ಥಿತರಿದ್ದರು.

Leave a Reply

You May Have Missed

error: Content is protected !!