ಬಸ್, ಕಾರು ಢಿಕ್ಕಿ: ದಂಪತಿ ಮೃತ್ಯು

ಬಸ್, ಕಾರು ಢಿಕ್ಕಿ: ದಂಪತಿ ಮೃತ್ಯು

ಮಡಿಕೇರಿ : ಭೀಕರ ರಸ್ತೆ ಅಪಘಾತದಲ್ಲಿ ಕೊಡಗು ಜಿಲ್ಲೆಯ ಸೋಮವಾರಪೇಟೆ ಬಳಿಯ ಹಿರಿಕರ ಗ್ರಾಮದ ದಂಪತಿ ಸಾವನ್ನಪ್ಪಿರುವ ಘಟನೆ ಬಿಳಿಕೆರೆ ಬಳಿಯ ರಂಗನಕೊಪ್ಪಲು ಹೆದ್ದಾರಿಯಲ್ಲಿ ಶನಿವಾವಾರ ವರದಿಯಾಗಿದೆ.

ಕೆಎಸ್ಸಾರ್ಟಿಸಿ ಬಸ್ ಮತ್ತು ಕಾರು ನಡುವೆ ಢಿಕ್ಕಿ ಸಂಭವಿಸಿ ಮೈಸೂರು ಕಡೆಗೆ ಕಾರಿನಲ್ಲಿ ಸಂಚರಿಸುತ್ತಿದ್ದ ನಿವೃತ್ತ ಪ್ರಾಂಶುಪಾಲ ಹಿರಿಕರ ಗ್ರಾಮದ ನಿವಾಸಿ ಹೆಚ್.ಬಿ.ಬೆಳ್ಳಿಯಪ್ಪ (66) ಸ್ಥಳದಲ್ಲೇ ಮೃತಪಟ್ಟರು.
ಬೆಳ್ಳಿಯಪ್ಪ ಅವರ ಪತ್ನಿ ವೀಣಾ ಅವರನ್ನು ಆಸ್ಪತ್ರೆಗೆ ಕರೆದೊಯ್ಯುವ ಸಂದರ್ಭ ಸಾವನ್ನಪ್ಪಿದ್ದಾರೆ ಎಂದು ಹೇಳಲಾಗಿದೆ.
ಕಾರು ಸಂಪೂರ್ಣವಾಗಿ ಜಖಂಗೊಂಡಿದ್ದು, ಬಿಳಿಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Previous post

ಉಜಿರೆ ಶ್ರೀ ಧ.ಮಂ ಪ.ಪೂ ಕಾಲೇಜು ಸಂಸ್ಕೃತ ಅಂತರಾಧ್ಯಯನ ವೃತ್ತದ ಸಂಯೋಜಕರಾಗಿ ಅಂಜಲಿ ಹಾಗೂ ಪ್ರೀತಮ್ ಮೆನೇಜಸ್ ಆಯ್ಕೆ

Next post

ಇಲಾಖೆಯಲ್ಲಿ ಕರ್ತವ್ಯ, ಸೇವೆ ಜೊತೆಯಲ್ಲಿ ಹೋದಲ್ಲಿ ಬಡವರಿಗೆ ನ್ಯಾಯ ಸಿಗುವ ಕೆಲಸ ಆಗುತ್ತದೆ- ಶಾಸಕ ಅಶೋಕ್ ಕುಮಾರ್ ರೈ

Leave a Reply

You May Have Missed

error: Content is protected !!