ಬಸ್‌-ಕಾರು ಮುಖಾಮುಖಿ

ಬಸ್‌-ಕಾರು ಮುಖಾಮುಖಿ

ಬಸ್‌ ಹಾಗೂ ಕಾರಿನ ನಡುವೆ ಭೀಕರ ಅಪಘಾತ ಸಂಭವಿಸಿರುವ ಘಟನೆ ಮುಡಿಪು ಜಂಕ್ಷನ್‌ನಲ್ಲಿ ಸೋಮವಾರ ರಾತ್ರಿ ವೇಳೆ ಸಂಭವಿಸಿದೆ. ಘಟನೆಯಲ್ಲಿ ಕಾರು ಚಾಲಕ ಪವಾಡಸದೃಶ ರೀತಿಯಲ್ಲಿ ಪಾರಾಗಿದ್ದಾರೆ.
ಮಂಗಳೂರಿನಿಂದ ಬಿ.ಸಿ. ರೋಡಿ ನತ್ತ ತೆರಳುತ್ತಿದ್ದ ಎನ್‌.ಎಸ್‌. ಟ್ರಾವೆಲ್ಸ್‌ ಬಸ್ಸು ಮುಡಿಪು ಜಂಕ್ಷನ್‌ನಲ್ಲಿ ತಿರುಗುವ ಸಂದರ್ಭ ಭಾರತಿ ಶಾಲೆ ಕಡೆಯಿಂದ ಬರುತ್ತಿದ್ದ ಝೆನ್‌ ಕಾರಿಗೆ ಮುಖಾಮುಖಿ ಢಿಕ್ಕಿ ಹೊಡೆದಿದೆ.
ಬಸ್ಸು ಮುಂಭಾಗಕ್ಕೆ ಕಾರು ಒಳನುಗ್ಗಿದ್ದು, ಕಾರು ಚಾಲಕ ಪವಾಡ ಸದೃಶ ರೀತಿಯಲ್ಲಿ ಪಾರಾಗಿ ದ್ದಾರೆ.
ಮಂಗಳೂರು ದಕ್ಷಿಣ ಸಂಚಾರಿ ಠಾಣೆ ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದ್ದಾರೆ.

Leave a Reply

You May Have Missed

error: Content is protected !!