ಬೈಕ್, ಮೊಬೈಲ್ ಗಳನ್ನು ಕದ್ದು ಮೋಜು ಮಸ್ತಿ; ನಾಲ್ವರ ಬಂಧನ

ಶೋಕಿಗೋಸ್ಕರ ಹೊಸಕೋಟೆ ಸುತ್ತಾಮುತ್ತ ಬೈಕ್ಗಳನ್ನು ಕದ್ದು, ಮಾರಾಟ ಮಾಡಿ ಮೋಜು ಮಸ್ತಿ ಮಾಡುತ್ತಿದ್ದ ಓರ್ವ ಅಪ್ರಾಪ್ತ ಸೇರಿದಂತೆ ನಾಲ್ವರು ಆರೋಪಿಗಳನ್ನು ಹೊಸಕೋಟೆ ಪೊಲೀಸರು ಬಂದಿಸಿದ್ದಾರೆ.
ಹೊಸಕೋಟೆಯ ಹಲವೆಡೆ ಮನೆ ಹಾಗೂ ಬಡಾವಣೆಗಳಲ್ಲಿ ರೌಂಡ್ಸ್ ಹಾಕುತ್ತಿದ್ದ ಇವರು, ನಂತರ ಮನೆ ಮುಂದೆ ಹಾಗೂ ಪ್ಲೈ ಒವರ್ ಕೆಳಗಡೆ ನಿಲ್ಲಿಸಿ ಹೋಗುತ್ತಿದ್ದ ಬೈಕ್ಗಳನ್ನು ಕಳ್ಳತನ ಮಾಡಿಕೊಂಡು ಹೋಗಿ ಮಾರಾಟ ಮಾಡುತ್ತಿದ್ದರು ಎಂದು ತಿಳಿದು ಬಂದಿದೆ.
ಅಲ್ಲದೇ ಬೈಕ್ಗಳು ಕದಿಯಲು ಸಾದ್ಯವಾಗದಿದ್ದಾಗ ಬಸ್ಟ್ಯಾಂಡ್ನಲ್ಲಿ ಹಾಗೂ ಒಂಟಿಯಾಗಿ ಓಡಾಡುವ ಜನರ ಬಳಿ ಮೊಬೈಲ್ಗಳನ್ನ ಕಸಿದು ಪರಾರಿ ಆಗುತ್ತಿದ್ದರು.
ಇದೇ ರೀತಿ ಕಳೆದ ಹಲವು ತಿಂಗಳುಗಳಿಂದ ಕಳ್ಳತನ ಮಾಡಿದ್ದ 10 ಲಕ್ಷ ರೂ. ಮೌಲ್ಯದ ವಿವಿಧ ಕಂಪನಿಗಳ 9 ದ್ವಿಚಕ್ರವಾಹನಗಳು 12 ಮೊಬೈಲ್ಗಳನ್ನ ಹೊಸಕೋಟೆ ಪೊಲೀಸರು ವಶಪಡಿಸಿಕೊಂಡಿಸಿದ್ದಾರೆ.
ಈ ಕುರಿತು ಹೊಸಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
















Leave a Reply