ರೈಲಿನಿಂದ ಆಯತಪ್ಪಿ ಬೀಳುತ್ತಿದ್ದ ವೃದ್ಧನ ಜೀವ ಉಳಿಸಿದ ಆರ್‌ಪಿಎಫ್ ಸಿಬಂದಿ

ರೈಲಿನಿಂದ ಆಯತಪ್ಪಿ ಬೀಳುತ್ತಿದ್ದ ವೃದ್ಧನ ಜೀವ ಉಳಿಸಿದ ಆರ್‌ಪಿಎಫ್ ಸಿಬಂದಿ

ಮಂಗಳೂರು: ಇಲ್ಲಿನ ನಿಲ್ದಾಣದಲ್ಲಿ ಚಲಿಸುತ್ತಿದ್ದ ಮಲಬಾರ್ ಎಕ್ಸ್ ಪ್ರೆಸ್ ರೈಲಿನ ಕೋಚ್‌ ಹತ್ತಲು ಪ್ರಯತ್ನಿಸುತ್ತಿದ್ದ ವಯಸ್ಸಾದ ವ್ಯಕ್ತಿ ಆಯ ತಪ್ಪಿ ಬೀಳುತ್ತಿದ್ದ ವೇಳೆ ಆರ್‌ಪಿಎಫ್ ಸಿಬಂದಿ ರಕ್ಷಣೆ ಮಾಡಿದ್ದಾರೆ.

ವೃದ್ಧ ಕೋಚ್‌ನಲ್ಲಿ ಹತ್ತಲು ಸಾಧ್ಯವಾಗದೇ ಹ್ಯಾಂಡಲ್‌ನಲ್ಲಿ ನೇತಾಡುತ್ತಿದ್ದರು. ಈ ವೇಳೆ ತತ್ ಕ್ಷಣ ನೆರವಿಗೆ ಧಾವಿಸಿದ ಆರ್‌ಪಿಎಫ್ ಸಿಬಂದಿ ಕೆ.ಎಂ.ಕೆ. ಪ್ರಕೇಶ್ ಎಳೆದು ರಕ್ಷಿಸಿದ್ದಾರೆ.
ಹಳಿ ಮತ್ತು ರೈಲಿನ ನಡುವೆ ಬೀಳುವ ಸಾಧ್ಯತೆಯನ್ನು ತಪ್ಪಿಸಿದರು.

ರಕ್ಷಣೆಗೊಳಗಾದ ವ್ಯಕ್ತಿ ಕಣ್ಣೂರಿನ ಶಂಕರ ಬಾಬು(70) ಎನ್ನುವವರಾಗಿದ್ದು, ಅವರ ಬಲಗಾಲಿನ ಬೆರಳಿಗೆ ಸ್ವಲ್ಪ ಗಾಯವಾಗಿದೆ. RPF ಕಚೇರಿಗೆ ಕರೆತಂದು ಪ್ರಥಮ ಚಿಕಿತ್ಸೆ ನೀಡಲಾಗಿದೆ.

Previous post

ಮರ ಬಿದ್ದು ಸಂಚಾರ ವ್ಯತ್ಯಯ : ಸಾರ್ವಜನಿಕರ ಕ್ಷಿಪ್ರ ಕಾರ್ಯಚರಣೆಯಿಂದ ಮರ ತೆರವು

Next post

ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಟೆಂಡರ್‌ ನಡೆಸದೇ ಮಂಗಳೂರಿನ ಬಜಾರ್‌ ರಿಂದ ನಿಯಮಬಾಹಿರವಾಗಿ ದಿನಸಿ ಸಾಮಗ್ರಿ ಖರೀದಿ: ಆರೋಪ

Leave a Reply

You May Have Missed

error: Content is protected !!