ಮೂರು ದಿನದ‌‌ ಹಸುಗೂಸನ್ನು ಆಸ್ಪತ್ರೆಯ ತೊಟ್ಟಿಲಿನಲ್ಲಿ ಬಿಟ್ಟುಹೋದ ತಾಯಿ

ಮೂರು ದಿನದ‌‌ ಹಸುಗೂಸನ್ನು ಆಸ್ಪತ್ರೆಯ ತೊಟ್ಟಿಲಿನಲ್ಲಿ ಬಿಟ್ಟುಹೋದ ತಾಯಿ

ತಾಯಿಯೊಬ್ಬಳು ಮೂರು ದಿನದ‌‌ ಹಸುಗೂಸನ್ನು ಆಸ್ಪತ್ರೆಯ ತೊಟ್ಟಿಲಿನಲ್ಲಿ ಬಿಟ್ಟುಹೋದ ಘಟನೆ ಪಟ್ಟಣದ ಜ್ಯೋತಿ ಆರೋಗ್ಯ ಆಸ್ಪತ್ರೆಯಲ್ಲಿ ಆ.4ರ ಶುಕ್ರವಾರ ನಡೆದಿದೆ.

ಯಾರೋ ತಮ್ಮ ಮೂರು ದಿನದ ಹಸುಗೂಸನ್ನು ಶುಕ್ರವಾರ ನಸುಕಿನ ವೇಳೆ ಆಸ್ಪತ್ರೆಯ ಮುಂದೆ ಇಟ್ಟಿರುವ ತೊಟ್ಟಿಲಿನಲ್ಲೇ ಮಗುವನ್ನು ಹಾಕಿ ಹೋಗಿದ್ದಾರೆ.
ಜ್ಯೋತಿ ಆರೋಗ್ಯ ಕೇಂದ್ರದ ಮುಂಭಾಗದಲ್ಲಿ ಮಗುವನ್ನು ಹೆತ್ತು ಸಾಕಲಾಗದೇ ಇರುವವರಿಗಾಗಿ ತೊಟ್ಟಿಲೊಂದನ್ನು ಕಟ್ಟಿಡಲಾಗಿದ್ದು, ನಾಮಫಲಕ ನೋಡಿ ಯಾರೋ ತಮ್ಮ ಹಸುಗೂಸನ್ನು ನಸುಕಿನ ಜಾವ ತೊಟ್ಟಿಲಲ್ಲಿ ಹಾಕಿ ಹೋಗಿದ್ದಾರೆ.

ಮಗುವನ್ನು ಗಮನಿಸಿದ ಆಸ್ಪತ್ರೆಯವರು ತಕ್ಷಣವೇ ಪೊಲೀಸ್ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯವರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕಾಗಮಿಸಿದ ಅಧಿಕಾರಿಗಳು ಮಗುವನ್ನು ಶಿರಸಿಯ ದತ್ತು ಕೇಂದ್ರಕ್ಕೆ ನೀಡಲು ಕ್ರಮ ವಹಿಸಿದ್ದಾರೆ.

Leave a Reply

You May Have Missed

error: Content is protected !!