ಕದ್ದು ದನದ ಹಾಲು ಕರೆದ ಮಹಿಳೆ; ಕೃತ್ಯ ಸಿಸಿ ಕೆಮರಾದಲ್ಲಿ ದಾಖಲು

ಕದ್ದು ದನದ ಹಾಲು ಕರೆದ ಮಹಿಳೆ; ಕೃತ್ಯ ಸಿಸಿ ಕೆಮರಾದಲ್ಲಿ ದಾಖಲು

ಸುಳ್ಯ: ತಾಲೂಕಿನ ಪಂಜ ಸಮೀಪದ ಕರಿಕ್ಕಳ ಮನೆಯೊಂದರ ಹಟ್ಟಿಯಲ್ಲಿದ್ದ ದನದ ಕೆಚ್ಚಲಿನಿಂದ ಮಹಿಳೆಯೊಬ್ಬರು ಹಾಲು ಕದ್ದ ಆರೋಪ ಕೇಳಿಬಂದಿದೆ.

ಕರಿಕ್ಕಳದ ಮನೆಯೊಂದರಲ್ಲಿ ಮಹಿಳೆಯೊಬ್ಬರು ಹಲವು ವರ್ಷಗಳಿಂದ ಹಾಲು ಕರೆಯುವ ಕೆಲಸದಲ್ಲಿದ್ದು ಅವರೇ ಡೈರಿಗೆ ಕೊಂಡೊಯ್ಯುತಿದ್ದರು. ಇತ್ತೀಚೆಗೆ ಆ ಮಹಿಳೆ 4-5 ದಿವಸ ರಜೆ ಮಾಡಿದ್ದರು. ಈ ಸಂದರ್ಭ ಮನೆಯವರು ಹಾಲು ಕರೆಯುವ ಕೆಲಸಕ್ಕೆ ಬೇರೊಂದು ವ್ಯಕ್ತಿಯನ್ನು ನೇಮಿಸಿದ್ದರು.

ಆದರೆ ಹೊಸದಾಗಿ ನೇಮಕಗೊಂಡ ಹಾಲು ಕರೆಯುವವನಿಗೆ ಮಾಮೂಲಿನಷ್ಟು ಹಾಲು ಸಿಗುತ್ತಿರಲಿಲ್ಲ. ಹೊಸದಾಗಿ ಸೇರಿದಾತ ದನದ ಕೆಚ್ಚಲು ಮಾಮೂಲಿನಂತೆ ಇರುವುದಿಲ್ಲ ಯಾರೋ ಹಾಲು ಕರೆಯುತ್ತಿದ್ದಾರೆಂದು ದನದ ಮಾಲಕರಲ್ಲಿ ದೂರಿಕೊಂಡಿದ್ದರು. ಇದನ್ನು ಆಧರಿಸಿ ಮನೆಯವರು ಹಟ್ಟಿಗೆ ಅಳವಡಿಸಿದ್ದ ಸಿ.ಸಿ ಕ್ಯಾಮರಾ ಪರಿಶೀಲನೆ ಮಾಡಿದಾಗ ಪ್ರಾತ:ಕಾಲ 4 ­ 5 ಗಂಟೆಗೆ ಮಹಿಳೆಯೊಬ್ಬರು ಬಂದು ದನದ ಕೆಚ್ಚಲಿನಿಂದ ಅರ್ಧ ಹಾಲು ಕರೆದು ಹೋಗುತ್ತಿರುವ ದೃಶ್ಯ ಕಂಡುಬಂದಿದೆ.

Leave a Reply

You May Have Missed

error: Content is protected !!