ಗೋಳಿತೊಟ್ಟು:ಕಾಡಾನೆ ದಾಳಿಗೆ 25ಕ್ಕೂ ಹೆಚ್ಚು ಬಾಳೆ ಕೃಷಿ ನಾಶ

ಗೋಳಿತೊಟ್ಟು:ಕಾಡಾನೆ ದಾಳಿಗೆ 25ಕ್ಕೂ ಹೆಚ್ಚು ಬಾಳೆ ಕೃಷಿ ನಾಶ

ಗೋಳಿತೊಟ್ಟು: ಇಲ್ಲಿಯ ಅಂಭರ್ಜೆ ನಿವಾಸಿ ವೀರಪ್ಪ ಪೂಜಾರಿ ಇವರ ತೋಟದಲ್ಲಿ ಕಾಡಾನೆ ದಾಳಿಗೆ ಅಪಾರ ಪ್ರಮಾಣದ ಬಾಳೆ ಕೃಷಿ ಬೆಳೆ ನಾಶವಾಗಿದೆ.

ರಾತ್ರಿ ವೇಳೆ ತೋಟಕ್ಕೆ ಆನೆ ನುಗ್ಗಿ 25ಕ್ಕೂ ಹೆಚ್ಚಿನ ಬಾಳೆಗಿಡ ನಾಶಮಾಡಿದೆ. ಸುತ್ತಮುತ್ತಲಿನ ನಿವಾಸಿಗಳು ಶಾಲೆಗೆ ಹೋಗುವ ಮಕ್ಕಳು ಭಯಭೀತರಾಗಿದ್ದಾರೆ. ಕಳೆದ 4 ದಿನಗಳಿಂದ ಕಾಡಾನೆ ಈ ಪ್ರದೇಶದಲ್ಲಿ ಸಂಚರಿಸುತ್ತಿರುವ ಬಗ್ಗೆ ಸ್ಥಳೀಯರು ತಿಳಿಸಿದರು.

ಅರಣ್ಯ ಇಲಾಖೆಯ ಉಪವಲಯ ಅರಣ್ಯಅಧಿಕಾರಿ ಸುನಿಲ್, ಅರಣ್ಯ ರಕ್ಷಕ ದುರ್ಗಾ ಪ್ರಸಾದ್ ಆಗಾಗ ಈ ಪ್ರದೇಶಗಳಿಗೆ ಪ್ರದೇಶದಲ್ಲಿ ಭೇಟಿ ನೀಡುತ್ತಾ, ಸಾರ್ವಜನಿಕರಿಗೆ ಎಚ್ಚರಿಕೆಯನ್ನು ನೀಡುತ್ತಾ ಸಾರ್ವಜನಿಕರೊಂದಿಗೆ ಸಹಕರಿಸುತ್ತಿದ್ದಾರೆ ಎಂದು ಸ್ಥಳೀಯರು ಮಾಧ್ಯಮಕ್ಕೆ ತಿಳಿಸಿದರು.

Leave a Reply

You May Have Missed

error: Content is protected !!