ಮಹಿಳೆಯ ಮಾನಭಂಗಕ್ಕೆ ಯತ್ನ, ನಾಲ್ವರ ವಿರುದ್ಧ ಪ್ರಕರಣ ದಾಖಲು

ಮಹಿಳೆಯ ಮಾನಭಂಗಕ್ಕೆ ಯತ್ನ, ನಾಲ್ವರ ವಿರುದ್ಧ ಪ್ರಕರಣ ದಾಖಲು

ಕ್ಷುಲ್ಲಕ ವಿಚಾರಕ್ಕೆ ಸಂಬಂಧಿಸಿ ನೆರೆಹೊರೆಯ ಎರಡು ಕುಟುಂಬಗಳ ನಡುವೆ ಜಗಳ ನಡೆದಿದ್ದು, ಮಾನಭಂಗ ಯತ್ನ ನಡೆದ ಬಗ್ಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಂಬಳಬೆಟ್ಟು ಕಾಂಪ್ಲೆಕ್ಸ್ ನಲ್ಲಿ ವಾಸವಿರುವ ಜೈನುಲ್ ಅಬೀದ್ ಅವರ ಪತ್ನಿ ಆಯಿಶತ್ ಮುಬೀನಾ ಅವರು ವಿಟ್ಲ‌ ಪೊಲೀಸರಿಗೆ ದೂರು ನೀಡಿದ್ದು, ಅದರಂತೆ ಅದೇ ಕಾಂಪ್ಲೆಕ್ಸ್ ನಲ್ಲಿ ವಾಸವಿರುವ ಆರೋಪಿಗಳಾದ ಹನ್ನತ್, ಆಕೆಯ ಸಹೋದರಿ, ಆಕೆಯ ತಾಯಿ, ಹಾಗೂ ಹನ್ನತ್ ಮಾವನ ವಿರುದ್ಧ ಮಾನಭಂಗ ಯತ್ನ ಪ್ರಕರಣ ದಾಖಲಾಗಿದೆ.

ವಿಟ್ಲಮುಡ್ನೂರು ಗ್ರಾಮದ ಕಂಬಳಬೆಟ್ಟು ಕಾಂಪ್ಲೆಕ್ಸ್ ನಲ್ಲಿ ವಾಸವಿರುವ ಮುಬೀನಾ ತನ್ನ ತವರು ಮನೆಗೆ ಹೋಗಲು ಹೊರಡುತ್ತಿದ್ದ ಸಮಯ ನೆರೆ ಮನೆಯ ನಿವಾಸಿ ಹನ್ನತ್ ಮಗಳಾದ ಮಹದಿಗೆ ಕೆಟ್ಟ ಶಬ್ದಗಳಿಂದ ಬೈಯುತ್ತಿದ್ದರು. ಈ ಬಗ್ಗೆ ವಿಚಾರಿಸಿದಾಗ ಅವಾಚ್ಯ ಶಬ್ದಗಳಿಂದ ನಿಂದಿಸಿ, ಕೊಲೆ ಮಾಡುವುದಾಗಿ ಜೀವ ಬೆದರಿಕೆ ಹಾಕಿ ಹನ್ನತ್ ನ ಮಾವ ಮೈಮೇಲೆ ಕೈ ಹಾಕಿ ಬುರ್ಖಾವನ್ನು ಹರಿದು ಹಾಕಿ, ಮಾನಭಂಗ ಯತ್ನಿಸಿದ್ದು ಆ ಸಮಯ ಮುಬೀನಾ ನೆಲಕ್ಕೆ ಬಿದ್ದಾಗ ಹೊಟ್ಟೆಗೆ ಹನ್ನತ್ ಮತ್ತು ಆಕೆಯ ತಾಯಿ ಕಾಲಿನಿಂದ ತುಳಿದುದರಿಂದ ಗಾಯಗೊಂಡಿರುತ್ತಾರೆ. ಗಾಯಾಳುಗಳು ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

Leave a Reply

You May Have Missed

error: Content is protected !!