ಹರಿಶ್ಚಂದ್ರ ಘಾಟ್‌ನಲ್ಲಿ ನೆರವೇರಿದ ಸ್ಪಂದನಾ ಅಂತ್ಯಸಂಸ್ಕಾರ

ಹರಿಶ್ಚಂದ್ರ ಘಾಟ್‌ನಲ್ಲಿ ನೆರವೇರಿದ ಸ್ಪಂದನಾ ಅಂತ್ಯಸಂಸ್ಕಾರ

ಸ್ಯಾಂಡಲ್‌ವುಡ್ ನಟ ವಿಜಯ ರಾಘವೇಂದ್ರ ಪತ್ನಿ ಸ್ಪಂದನಾಅವರ ಅಂತ್ಯಕ್ರಿಯೆ ಇಂದು (ಆಗಸ್ಟ್ 9) ಹರಿಶ್ಚಂದ್ರ ಘಾಟ್‌ನಲ್ಲಿ ನೆರವೇರಿತು. ಈಡಿಗ ಪದ್ಧತಿಯಂತೆ ಸ್ಪಂದನಾ ಅವರ ಅಂತ್ಯಕ್ರಿಯೆ ಮಾಡಲಾಯಿತು. ಪತ್ನಿಯ ಅಂತಿಮ ವಿದಾಯದ ವೇಳೆ ವಿಜಯ ರಾಘವೇಂದ್ರ ಭಾವುಕರಾದರು.

ಆಗಸ್ಟ್ 6ರಂದು ಸ್ಪಂದನಾ ಬ್ಯಾಂಕಾಕ್‌ನಲ್ಲಿ ಹೃದಯಾಘಾತದಿಂದ ನಿಧನರಾದರು. ಬ್ಯಾಂಕಾಕ್‌ನಿಂದ ಎಲ್ಲಾ ಪ್ರಕ್ರಿಯೆ ಮುಗಿಸಿ ನಿನ್ನೆ ತಡರಾತ್ರಿ ಸ್ಪಂದನಾ ಮೃತದೇಹ ತರಲಾಯಿತು. ಸ್ಪಂದನಾ ತಂದೆ ಬಿ.ಕೆ ಶಿವರಾಂ ಮನೆಯಲ್ಲಿ ಅಂತಿಮ ನಮನಕ್ಕೆ ಸಿದ್ಧತೆ ಮಾಡಲಾಗಿತ್ತು. ಸಿನಿಮಾ ರಂಗದ ಗಣ್ಯರು, ಆಪ್ತರು, ರಾಜಕೀಯ ಗಣ್ಯರು ಸ್ಪಂದನಾರ ಅಂತಿಮ ದರ್ಶನ ಪಡೆದರು.
ಮಧ್ಯಾಹ್ನ 3ರ ಬಳಿಕ ಮಲ್ಲೇಶ್ವರಂ ನಿವಾಸದಿಂದ ಹರಿಶ್ಚಂದ್ರ ಘಾಟ್‌ವರೆಗೂ ಸ್ಪಂದನಾರ ಅಂತಿಮ ಯಾತ್ರೆ ಮಾಡಲಾಯಿತು. ಬಳಿಕ ಈಡಿಗ ಸಂಪ್ರದಾಯದಂತೆ ಸ್ಪಂದನಾ ಅಂತ್ಯ ಸಂಸ್ಕಾರ ಮಾಡಲಾಗಿದೆ. ಪತಿ ವಿಜಯ ರಾಘವೇಂದ್ರ- ಪುತ್ರ ಶೌರ್ಯ ಸ್ಪಂದನಾರ ಅಂತಿಮ ಕಾರ್ಯವನ್ನ ಸಲ್ಲಿಸಿದ್ದಾರೆ.

Previous post

ಪ್ರತಿಷ್ಠಿತ ಗುರುಪುರ ಗ್ರಾಮ ಪಂಚಾಯತ್ SDPI ತೆಕ್ಕೆಗೆ;ಅಧ್ಯಕ್ಷೆಯಾಗಿ ಸಫಾರ ನಾಸೀರ್, ಉಪಾಧ್ಯಕ್ಷರಾಗಿ ಪಕ್ಷೇತರ ಅಭ್ಯರ್ಥಿ ದಾವೂದ್ ಆಯ್ಕೆ

Next post

ಯುವಕ ಯುವತಿಯರು ಮಾದಕ ಪದಾರ್ಥಗಳ ಆಕರ್ಷಣೆಯಿಂದ ಹೊರಬರಬೇಕು – ವಿವೇಕ್ ವಿ ಪಾಯಸ್

Leave a Reply

You May Have Missed

error: Content is protected !!