ಕೊಕ್ಕಡ ICYM ಘಟಕದ ವತಿಯಿಂದ ರಕ್ತದಾನ ಶಿಬಿರ

ಕೊಕ್ಕಡ ICYM ಘಟಕದ ವತಿಯಿಂದ ರಕ್ತದಾನ ಶಿಬಿರ

ಕೊಕ್ಕಡ ICYM ಘಟಕದ ವತಿಯಿಂದ ರಕ್ತದಾನ ಶಿಬಿರವು ಆ.13ರಂದು ಸಂತ ಜೋನರ ಶಾಲೆಯಲ್ಲಿ ನಡೆಯಿತು.

ಹೂವಿನ ಗಿಡಕ್ಕೆ ನೀರನ್ನು ಹಾಕುವ ಮೂಲಕ ಅತಿಥಿ ಲ್ಯಾಬ್ ಟೆಕ್ನಿಶಿಯನ್ ಭರತ್ ರವರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಕಾರ್ಯಕ್ರಮದ ಸಭಾಧ್ಯಕ್ಷರಾದ ವಂದನೀಯ|ಫಾ| ಅಶೋಕ್ ಡಿಸೋಜರವರು ರಕ್ತದಾನದ ಮಹತ್ವವನ್ನು ವಿವರಿಸಿದರು.
ಚರ್ಚ್ ಪಾಲನ ಸಮಿತಿಯ ಉಪ್ಪಾಧ್ಯಕ್ಷರಾದ ಪ್ರವೀಣ್ ನೋಯೆಲ್ ಮೊಂತೆರೋ, ಕಾರ್ಯದರ್ಶಿ ವೀಣಾ ಮಸ್ಕರೇನಸ್, ICYM ಮಂಗಳೂರು ಪ್ರಾಂತ್ಯದ ರೆಡ್ ಡ್ರಾಪ್ ಪ್ರತಿನಿಧಿ ಕೆವಿನ್ ರೊಡ್ರಿಗಸ್, ICYM ಪುತ್ತೂರು ವಲಯದ ಅಧ್ಯಕ್ಷರಾದ ಆಂಟೋನಿ ಮಸ್ಕರೇನಸ್, ಯುವ ಆಯೋಗದ ಸಂಚಾಲಕಿಯಾದ ಜೆಸಿಂತಾ ಡಿಸೋಜ, ICYM ಕೊಕ್ಕಡ ಘಟಕದ ಸಚೇತಕರು ಜಯಂತ್ ಡಿಸೋಜ, ಅಧ್ಯಕ್ಷರಾದ ಪ್ರದೀಪ್ ಡಿಸೋಜ, ಕಾರ್ಯದರ್ಶಿ ಸಹನಾ ಮರಿಯ ಡಿಸೋಜರವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಇಂಡಿಯನ್ ರೆಡ್ ಕ್ರಾಸ್ ಸೊಸೈಟಿ ಬ್ಲಡ್ ಬ್ಯಾಂಕ್, ಲೇಡಿ ಗೋಷೇನ್ ಆಸ್ಪತ್ರೆಯ ತಂಡದ ಸಿಬ್ಬಂಧಿಗಳು ಈ ರಕ್ತದಾನ ಶಿಬಿರವನ್ನು ನಡೆಸಿಕೊಟ್ಟರು. ಶಿಬಿರದಲ್ಲಿ ಹಲವಾರು ದಾನಿಗಳು ರಕ್ತದಾನ ಮಾಡಿದರು.

Previous post

ಗೋಳಿತೊಟ್ಟು ಗ್ರಾಮ ಸಭೆಯಲ್ಲಿ ವೈದ್ಯಾಧಿಕಾರಿಗೆ ಮಾನಸಿಕ ಒತ್ತಡ ಮತ್ತು ಹಿಂಸೆ- ಸೂಕ್ತ ಕ್ರಮಕ್ಕೆ ವೈದ್ಯಾಧಿಕಾರಿ ಸಂಘದಿಂದ ಮನವಿ

Next post

ಕಡಬ:ನೂಜಿಬಾಳ್ತಿಲ ಬೆಥನಿ ಪದವಿಪೂರ್ವ ಕಾಲೇಜ್ ನಲ್ಲಿ ತುಳುನಾಡ ಆಟಿಡ್ ಒಂಜಿ ದಿನ

Leave a Reply

You May Have Missed

error: Content is protected !!