ಉಪ್ಪಿನಂಗಡಿ ಪೊಲೀಸ್ ಅಧಿಕಾರಿಗಳಿಂದ ಭರ್ಜರಿ ಬೇಟೆ: 40,000 ಮೌಲ್ಯದ ಗಾಂಜಾ ವಶ

ಉಪ್ಪಿನಂಗಡಿ ಪೊಲೀಸ್ ಅಧಿಕಾರಿಗಳಿಂದ ಭರ್ಜರಿ ಬೇಟೆ: 40,000 ಮೌಲ್ಯದ ಗಾಂಜಾ ವಶ

ಉಪ್ಪಿನಂಗಡಿ: ಇಲ್ಲಿನ ಕೂಟೇಲು ಎಂಬಲ್ಲಿ ಲಾರಿಯೊಂದರಲ್ಲಿ 2.1 ಕೆ.ಜಿ. ಗಾಂಜಾವನ್ನು ಸಾಗಾಟ ಮಾಡುತ್ತಿದ್ದ ಪ್ರಕರಣವನ್ನು ಉಪ್ಪಿನಂಗಡಿ ಪೊಲೀಸರು ಪತ್ತೆ ಹಚ್ಚಿ ಆರೋಪಿಯನ್ನು ಬಂಧಿಸಿದ್ದಾರೆ.
ಆರೋಪಿ ರಾಘವೇಂದ್ರ ಅಮೀನ್‌ ಮಾದಕವಸ್ತು ಗಾಂಜಾವನ್ನು ಹೆಚ್ಚಿನ ಹಣಕ್ಕೆ ಮಾರಾಟ ಮಾಡುವ ಉದ್ದೇಶದಿಂದ ಮೈಸೂರಿನ ಆಲಿ ಮೊಹಮ್ಮದ್‌ ಅಲಿಯಾಸ್‌ ಸಲೀಂ ಮೈಸೂರು ಎಂಬಾತನಿಂದ ತೆಗೆದುಕೊಂಡು ಮಂಗಳೂರು ಕಡೆಗೆ ತಾನು ಚಲಾಯಿಸಿಕೊಂಡು ಹೋಗುತ್ತಿದ್ದ ಲಾರಿಯಲ್ಲಿ ಸಾಗಾಟ ಮಾಡುತ್ತಿದ್ದಾಗ ಕೂಟೇಲು ಎಂಬಲ್ಲಿ ಉಪ್ಪಿನಂಗಡಿ ಪೊಲೀಸರು ತಪಾಸಣೆಗೆ ಒಳಪಡಿಸಿ ಪತ್ತೆ ಹಚ್ಚಿದ್ದರು.
ಆರೋಪಿಯಿಂದ 40,000 ರೂ. ಮೌಲ್ಯದ 2 ಕೆ.ಜಿ. 100 ಗ್ರಾಮ್‌ ತೂಕದ ಗಾಂಜಾವನ್ನು ವಶಪಡಿಸಿಕೊಂಡು ಪ್ರಕರಣ ದಾಖಲಿಸಿದ್ದಾರೆ.

Leave a Reply

You May Have Missed

error: Content is protected !!