ಚಲಿಸುತ್ತಿರುವಾಗಲೇ ಕಳಚಿ ಬಿತ್ತು ಬಸ್‌ನ ಹಿಂಬದಿ ಚಕ್ರ

ಚಲಿಸುತ್ತಿರುವಾಗಲೇ ಕಳಚಿ ಬಿತ್ತು ಬಸ್‌ನ ಹಿಂಬದಿ ಚಕ್ರ

ಬಸ್ ಒಂದು ಚಲಿಸುತ್ತಿರುವಾಗಲೇ ಅದರ ಹಿಂಬದಿ ಚಕ್ರ ಕಳಚಿ ಬಿದ್ದಿರುವ ಘಟನೆ ಗದಗ ತಾಲೂಕಿನ ಹೊಂಬಳ ಗ್ರಾಮದ ಬಳಿ ನಡೆದಿದೆ.
ಗದಗದಿಂದ ನರಗುಂದಕ್ಕೆ ಹೊರಟಿದ್ದ ಬಸ್‌ನ ಚಕ್ರ ಕಳಚಿ ಬಿದ್ದರೂ ಹತ್ತಾರು ಮೀಟರ್ ಮುಂದಕ್ಕೆ ಚಲಿಸಿದೆ. ಹಿಂಬದಿಯ ಡಬಲ್ ಚಕ್ರದ ಪೈಕಿ ಒಂದು ಚಕ್ರ ದಿಢೀರ್ ಕಳಚಿರುವ ದೃಶ್ಯ ಹಿಂಬದಿಯಿಂದ ಕಾರಿನಲ್ಲಿ ಪ್ರಯಾಣಿಸುತ್ತಿದ್ದವರು ತಮ್ಮ ಮೊಬೈಲಿನಲ್ಲಿ ಸೆರೆಹಿಡಿದಿದ್ದಾರೆ.
ಬಸ್ ಗದಗ ಡಿಪೋಗೆ ಸೇರಿದ್ದು, ಘಟನೆ ವೇಳೆ ಸುಮಾರು 50 ಜನರು ಅದರಲ್ಲಿ ಪ್ರಯಾಣಿಸುತ್ತಿದ್ದರು. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಆದರೆ ಹೆಚ್ಚಿನ ಸಂಖ್ಯೆಯಲ್ಲಿ ಬಸ್‌ನಲ್ಲಿ ಪ್ರಯಾಣ ಮಾಡುತ್ತಿದ್ದ ವಿದ್ಯಾರ್ಥಿಗಳು ಚಕ್ರ ಕಳಚಿದ ವೇಳೆ ಬೆಚ್ಚಿಬಿದ್ದಿದ್ದಾರೆ.

Leave a Reply

You May Have Missed

error: Content is protected !!