ಯುವತಿ ನಾಪತ್ತೆ..!!; ದೂರು ದಾಖಲು

ಯುವತಿ ನಾಪತ್ತೆ..!!; ದೂರು ದಾಖಲು

ಉಪ್ಪಿನಂಗಡಿ ಗ್ರಾಮದ ನಿನ್ನಿಕಲ್ಲು ಎಂಬಲ್ಲಿ ಆ.22 ರಂದು ರಾತ್ರಿ ಊಟ ಮಾಡಿ ತಾಯಿಯ ಜೊತೆಗೆ ಮಲಗಿದ್ದ ಯುವತಿ ನಾಪತ್ತೆಯಾಗಿರುವ ಘಟನೆ ವರದಿಯಾಗಿದೆ.

ನಾಪತ್ತೆಯಾಗಿರುವ ಯುವತಿಯನ್ನು ಉಪ್ಪಿನಂಗಡಿ ಗ್ರಾಮದ ನಿನ್ನಿಕಲ್ಲು ಎಂಬಲ್ಲಿಯ ಫಾತಿಮತ್ ಶೌಹಾನ (17) ಎಂದು ಗುರುತಿಸಲಾಗಿದೆ. ಆ.22 ರಂದು ಫಾತಿಮತ್ ಶೌಹಾನ ರಾತ್ರಿ ಊಟ ಮುಗಿಸಿ ಆಕೆ ತಾಯಿಯ ಜೊತೆಗೆ ಮಲಗಿದ್ದಳು ಎನ್ನಲಾಗಿದೆ. ತಾಯಿ ಮರುದಿನ(ಆ.23) ಬೆಳ್ಳಿಗ್ಗೆ 06.00 ಗಂಟೆಗೆ ಎದ್ದು ನೋಡಿದಾಗ ಮಲಗಿದ್ದಲ್ಲಿ ಇಲ್ಲದೇ ಕಾಣೆಯಾಗಿದ್ದು, ಅವಳು ಉಪಯೋಗಿಸುವ ಮೊಬೈಲ್ ಸೆಟ್ ಕೊಡ ಕಾಣೆಯಾಗಿರುತ್ತದೆ ಅವಳ ಮೊಬೈಲ್ ಗೆ ಕರೆ ಮಾಡಿದಾಗ ಸ್ವಿಚ್ ಆಪ್ ಆಗಿದ್ದು ಈವರೆಗೆ ಹುಡುಕಾಡಿದರು ಪತ್ತೆಯಾಗಿರುವುದಿಲ್ಲ. ಈ ಬಗ್ಗೆ ಉಪ್ಪಿನಂಗಡಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

Leave a Reply

You May Have Missed

error: Content is protected !!