ಗೋಳಿತ್ತೂಟ್ಟು: Chandrayaan-3 ಯಶಸ್ಸಿನಲ್ಲಿ ಮಿಂಚಿದ ಕಾಂಚನ ಮಣಿಪುಳದ ಶಿವಪ್ರಸಾದ ಕಾರಂತ ವಿಜ್ಞಾನಿ

ಗೋಳಿತ್ತೂಟ್ಟು: Chandrayaan-3 ಯಶಸ್ಸಿನಲ್ಲಿ ಮಿಂಚಿದ ಕಾಂಚನ ಮಣಿಪುಳದ ಶಿವಪ್ರಸಾದ ಕಾರಂತ ವಿಜ್ಞಾನಿ

ಗೋಳಿತ್ತೂಟ್ಟು: ಶಿವಪ್ರಸಾದ ಕಾರಂತ ಅವರು ಗೋಳಿತ್ತೂಟ್ಟು ಗ್ರಾಮದ ಗ್ರಾಮೀಣ ಪ್ರದೇಶ ವಾಗಿರುವ ಕಾಂಚನದ ಮಣಿಪುಳದವರು. ಕೇಂದ್ರ ಸರಕಾರದಿಂದ ಕೇಂದ್ರ ಸಂಪುಟ ಕಾರ್ಯದರ್ಶಿ ಕೇಡರ್‌ ಗೆ ಸಮಾನವಾದ ಉನ್ನತ ವಿಜ್ಞಾನಿ ಹುದ್ದೆಗೆ ಭಡ್ತಿ ಪಡೆದಿರುವ 49ರ ಹರೆಯದ ಅವರು ಬೆಂಗಳೂರಿನ ಇಸ್ರೋ ಸಂಸ್ಥೆಯಲ್ಲಿ ಹಿರಿಯ ವಿಜ್ಞಾನಿಯಾಗಿದ್ದಾರೆ.

ಕಾಂಚನದ ಕಾರಂತರ ಮನೆತನದ ಪರಮೇಶ್ವರ ಕಾರಂತ ಡಿ.ಮತ್ತು ರಮಾದೇವಿ ಅವರ ಪುತ್ರನಾಗಿದ್ದು, ಪ್ರಾಥಮಿಕ ವಿದ್ಯಾಭ್ಯಾಸವನ್ನು ಕಾಂಚನದ ಶ್ರೀ ಲಕ್ಷ್ಮೀನಾರಾಯಣ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ, ಪ್ರೌಢ ಶಿಕ್ಷಣವನ್ನು ಕಾಂಚನದ ಶ್ರೀ ವೆಂಕಟಸುಬ್ರಹ್ಮಣ್ಯಂ ಸ್ಮಾರಕ ಪ್ರೌಢಶಾಲೆಯಲ್ಲಿ, ಪಿಯುಸಿ ಹಾಗೂ ಪದವಿ ಶಿಕ್ಷಣವನ್ನು ಶ್ರೀ ಕ್ಷೇತ್ರ ಧರ್ಮಸ್ಥಳದ ಸಿದ್ಧವನ ಗುರುಕುಲದಲ್ಲಿದ್ದು ಕೊಂಡು ಉಜಿರೆಯ ಎಸ್‌ ಡಿಎಂ ಕಾಲೇಜಿನಲ್ಲಿ, ಎಂ.ಟೆಕ್‌. ಪದವಿಯನ್ನು ಸುರತ್ಕಲ್‌ನ ಎನ್‌ ಐಟಿಕೆಯಲ್ಲಿ ಪೂರೈಸಿ 24 ವರ್ಷಗಳ ಹಿಂದೆ ಇಸ್ರೋ ಸೇರಿದ್ದರು.
ಪ್ರಸ್ತುತ ಅವರು ಪತ್ನಿ ರಶ್ಮಿ ಹಾಗೂ ಎಂ.ಟೆಕ್‌. ಓದುತ್ತಿರುವ ಪುತ್ರ ಪೃಥ್ವಿಯೊಂದಿಗೆ ಬೆಂಗಳೂರಿನಲ್ಲಿ ನೆಲೆಸಿದ್ದಾರೆ.

Leave a Reply

You May Have Missed

error: Content is protected !!