ದಿಂಬು ಅದುಮಿಟ್ಟು ಒಂಟಿ ಮಹಿಳೆಯ ದರೋಡೆ

ದಿಂಬು ಅದುಮಿಟ್ಟು ಒಂಟಿ ಮಹಿಳೆಯ ದರೋಡೆ

ಅಪರಿಚಿತ ಮಹಿಳೆಯೋರ್ವಳು ಮನೆಗೆ ನುಗ್ಗಿ ಒಂಟಿಯಾಗಿದ್ದ ವೃದ್ಧೆಯ ಮುಖಕ್ಕೆ ದಿಂಬಿನಿಂದ ಅದುಮಿ 22 ಗ್ರಾಮ್‌ ಚಿನ್ನದ ಸರ ದರೋಡೆಗೈದು ಪರಾರಿಯಾಗಿರುವ ಘಟನೆ ಕುಂಪಲ ಮೂರುಕಟ್ಟೆ ಒಂದನೇ ಅಡ್ಡ ರಸ್ತೆಯ ಮಿತ್ರನಗರ ಎಂಬಲ್ಲಿ ನಡೆದಿದೆ.

ಮಿತ್ರನಗರದ ಒಂಟಿ ಮನೆ ನಿವಾಸಿ ಸುಶೀಲಾ (76) ಅವರ ಕತ್ತಲ್ಲಿದ್ದ 22 ಗ್ರಾಮ್‌ ತೂಕದ ಹವಳ ಪೋಣಿತ ಚಿನ್ನದ ಸರ ದರೋಡೆ ನಡೆಸಲಾಗಿದೆ.ಸುಶೀಲಾ ಅವರ ಪತಿ ಉಗ್ಗಪ್ಪ ಮೂಲ್ಯ ಅವರು ಕೆಲವು ವರ್ಷಗಳ ಹಿಂದೆ ಸಾವನ್ನಪ್ಪಿದ್ದರು. ದಂಪತಿಗೆ ಮಕ್ಕಳಿರಲಿಲ್ಲ ಹಾಗಾಗಿ ಸುಶೀಲಾ ಅವರು ಮನೆಯಲ್ಲಿ ಒಂಟಿಯಾಗಿ ವಾಸಿಸುತ್ತಿದ್ದರು.

ಚೂಡಿದಾರ್‌ ಧರಿಸಿದ್ದಳು ಸುಶೀಲಾ ಅವರು ಮನೆಯ ಹಾಲ್‌ನಲ್ಲಿ ಮಲಗಿದ್ದ ಸಂದರ್ಭ ಮಹಿಳೆಯೊಬ್ಬಳು ಮನೆಯೊಳಗೆ ನುಗ್ಗಿ ಮುಖಕ್ಕೆ ದಿಂಬನ್ನು ಅದುಮಿ ಸರವನ್ನು ದರೋಡೆಗೈದು ಪರಾರಿಯಾಗಿದ್ದಾಳೆ. ದರೋಡೆಗೈದ ಆಗಂತುಕೆ ಬಾಗಿಲಿನಿಂದ ಹೊರ ಓಡಿದಾಗ ಸುಶೀಲಾ ಅವರು ಮಹಿಳೆ ಚೂಡಿದಾರ್‌ ಧರಿಸಿರುವುದನ್ನು ಗಮನಿಸಿದ್ದಾರೆ.

ಘಟನ ಸ್ಥಳಕ್ಕೆ ಉಳ್ಳಾಲ ಪೊಲೀಸ್‌ ಠಾಣಾ ನಿರೀಕ್ಷಕ ಸಂದೀಪ್‌, ಉಪ ನಿರೀಕ್ಷಕ ಶೀತಲ್‌ ನೇತೃತ್ವದ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಈ ಹಿಂದೆಯೂ ಸುಶೀಲಾ ಅವರ ಎರಡು ಚಿನ್ನದ ಬಳೆಗಳು ಕಳವಾಗಿದ್ದು, ಪೊಲೀಸ್‌ ದೂರು ನೀಡಿರಲಿಲ್ಲ.

Leave a Reply

You May Have Missed

error: Content is protected !!