Heart attack: ಸಿನಿಮಾ ನೋಡಲು ಹೋದವನಿಗೆ ಹೃದಯಾಘಾತ; ಕ್ಷಣ ಮಾತ್ರದಲ್ಲಿ ಹಾರಿಹೋಯಿತು ಪ್ರಾಣ

Heart attack: ಸಿನಿಮಾ ನೋಡಲು ಹೋದವನಿಗೆ ಹೃದಯಾಘಾತ; ಕ್ಷಣ ಮಾತ್ರದಲ್ಲಿ ಹಾರಿಹೋಯಿತು ಪ್ರಾಣ

ಸಿನಿಮಾ ನೋಡಲು ಥಿಯೇಟರ್‌ಗೆ ಹೋಗುತ್ತಿದ್ದ ವ್ಯಕ್ತಿಯೊಬ್ಬರು ಹೃದಯಾಘಾತದಿಂದ ಕುಸಿದು ಬಿದ್ದು ಮೃತಪಟ್ಟಿರುವ ಘಟನೆ ಉತ್ತರ ಪ್ರದೇಶದ ಲಖಿಂಪುರ ಖೇರಿಯಲ್ಲಿನ ಸಿನಿಮಾ ಹಾಲ್ ವೊಂದರಲ್ಲಿ ಇತ್ತೀಚೆಗೆ ನಡೆದಿದೆ.

ಮೃತ ವ್ಯಕ್ತಿಯನ್ನು ದ್ವಾರಕಾಪುರಿ ನಿವಾಸಿ ಅಷ್ಟಕ್ ತಿವಾರಿ ಎಂದು ಗುರುತಿಸಲಾಗಿದೆ.

ಅಷ್ಟಕ್‌ ಶನಿವಾರ ಸಂಜೆ 7:50 ರ ಹೊತ್ತಿಗೆ (ಆ.26 ರಂದು) ಇತ್ತೀಚೆಗೆ ತೆರೆ ಕಂಡಿರುವ ‘ಗದರ್-2‌ʼ ಸಿನಿಮಾವನ್ನು ನೋಡಲು ಲಖಿಂಪುರ ಖೇರಿಯಲ್ಲಿನ ಫನ್ ಸಿನಿಮಾ ಹಾಲ್ ಗೆ ತೆರಳಿದ್ದಾರೆ. ಥಿಯೇಟರ್‌ ಒಳಗೆ ಬರುತ್ತಿದ್ದಾಗ ಫೋನಿನಲ್ಲಿ ಮಾತನಾಡುತ್ತಾ ಬಂದಿರುವುದು ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಮೆಟ್ಟಲು ಹತ್ತಿ ಥಿಯೇಟರ್‌ ಒಳಗೆ ಪ್ರವೇಶಿಸಬೇಕೆನ್ನುವಾಗಲೇ ಅಷ್ಟಕ್ ತಿವಾರಿ ಇದ್ದಕ್ಕಿದ್ದಂತೆ ಕುಸಿದು ಬಿದ್ದಿದ್ದಾರೆ. ಈ ವೇಳೆ ಅವರ ಮುಂದೆ ನಡೆದುಕೊಂಡು ಹೋಗುತ್ತಿದ್ದವರು ಅವರ ನೆರವಿಗೆ ಧಾವಿಸಿದ್ದಾರೆ. ಕೂಡಲೇ ತಿವಾರಿಯನ್ನು ಆಸ್ಪತ್ರೆಗೆ ರವಾನಿಸಲಾಗಿದೆ. ಆದರೆ ಈ ವೇಳೆ ಅವರು ಆದಾಗಲೇ ಹೃದಯಾಘಾತದಿಂದ ಮೃತಪಟ್ಟಿರುವುದಾಗಿ ವೈದ್ಯರು ಹೇಳಿದ್ದಾರೆ.

Leave a Reply

You May Have Missed

error: Content is protected !!