Mannara Chopra: ನಟಿಯನ್ನು ಎಳೆದು ಕೆನ್ನೆಗೆ ಮುತ್ತು ಕೊಟ್ಟ ಆ ನಿರ್ದೇಶಕ ಯಾರು?; ವಿಡಿಯೋ ವೈರಲ್

Mannara Chopra: ನಟಿಯನ್ನು ಎಳೆದು ಕೆನ್ನೆಗೆ ಮುತ್ತು ಕೊಟ್ಟ ಆ ನಿರ್ದೇಶಕ ಯಾರು?; ವಿಡಿಯೋ ವೈರಲ್

ಕಲಾವಿದರು ಹಾಗೂ ನಿರ್ದೇಶಕ, ನಿರ್ಮಾಪಕರ ನಡುವೆ ಉತ್ತಮ ಬಾಂಧವ್ಯಗಳಿರುತ್ತವೆ. ಆದರೆ ಕೆಲವೊಮ್ಮೆ ಕೆಲ ವರ್ತನೆಗಳಿಂದ ಕಲಾವಿದರು ಪೇಚಿಗೆ ಸಿಲುಕಬೇಕಾಗುತ್ತದೆ. ಅಂಥದ್ದೇ ಒಂದು ಘಟನೆ ಟಾಲಿವುಡ್‌ ನಲ್ಲಿ ನಡೆದಿದೆ.
ಟಾಲಿವುಡ್‌ ನಲ್ಲಿ ನಂದಮೂರಿ ಬಾಲಕೃಷ್ಣ, ಗೋಪಿಚಂದ್ ಮತ್ತು ಸಾಯಿ ಧರಮ್ ತೇಜ್ ಮುಂತಾದ ಕಲಾವಿದರೊಂದಿಗೆ ಕೆಲಸ ಮಾಡಿರುವ ನಿರ್ದೇಶಕ ರವಿ ಕುಮಾರ್ ಚೌಧರಿ ಇತ್ತೀಚೆಗೆ ತಮ್ಮ ಸಿನಿಮಾದ ಪ್ರಚಾರದ ವೇಳೆ ನಟಿಯನ್ನು ಪೇಚಿಗೆ ಸಿಲುಕುವಂತೆ ಮಾಡಿದ್ದಾರೆ.
ರವಿ ಕುಮಾರ್ ಚೌಧರಿ ನಿರ್ದೇಶನದ ರಾಜ್ ತರುಣ್ ಮತ್ತು ಮನ್ನಾರಾ ಚೋಪ್ರಾ ಅಭಿನಯದ ʼತಿರಗಪದರ ಸಾಮಿʼ ರಿಲೀಸ್‌ ಗೆ ರೆಡಿಯಾಗಿದೆ. ಇತ್ತೀಚೆಗೆ ಸಿನಿಮಾದ ಟೀಸರ್‌ ಕೂಡ ರಿಲೀಸ್‌ ಆಗಿದೆ.

ಸಿನಿಮಾದ ಪ್ರಚಾರದ ಕಾರ್ಯಕ್ರಮದಲ್ಲಿ ನಟಿ ಮನ್ನಾರಾ ಚೋಪ್ರಾ ಸೇರಿದಂತೆ ಹಲವು ಕಲಾವಿದರು ಭಾಗಿಯಾಗಿದ್ದಾರೆ. ಪ್ರಚಾರದ ವೇಳೆ ಮಾಧ್ಯಮಗಳ ಮುಂದೆ ಫೋಟೋಗಳಿಗೆ ಪೋಸ್‌ ಕೊಡುವ ವೇಳೆ ನಿರ್ದೇಶಕರು ನಟಿಯನ್ನು ಆತ್ಮೀಯವಾಗಿ ಹಿಡಿದು, ಇದ್ದಕ್ಕಿದ್ದಂತೆ ಅವರ ಕೆನ್ನೆಗೆ ಮುತ್ತು ಕೊಟ್ಟಿದ್ದಾರೆ. ಇದಕ್ಕೆ ತಕ್ಷಣ ಕಸಿವಿಸಿಗೊಂಡ ನಟಿ ಮನ್ನಾರ ಪ್ರತಿಕ್ರಿಯೆ ನೀಡದೆ ಆಶ್ಚರ್ಯಗೊಂಡು ಸ್ಮೈಲ್‌ ಕೊಟ್ಟು ಸಮ್ಮುನ್ನಾಗಿದ್ದಾರೆ.
ಸದ್ಯ ಈ ವಿಡಿಯೋ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದ್ದು, ನಿರ್ದೇಶಕರು ನಟಿಯ ಅನುಮತಿಯಿಲ್ಲದೆ ಈ ರೀತಿ ವರ್ತಿಸಿದ್ದರ ಬಗ್ಗೆ ನೆಟ್ಟಿಗರು ನಿರ್ದೇಶಕರ ವಿರುದ್ಧ ಗರಂ ಆಗಿದ್ದಾರೆ.
“ಇದು ಅತ್ಯಂತ ಕೀಳಾದ ವರ್ತನೆ” ಎಂದು ಒಬ್ಬರು ಕಮೆಂಟ್‌ ಮಾಡಿದ್ದಾರೆ. “ನಿರ್ದೇಶಕರ ಇಂಥ ಅಸಹ್ಯ ವರ್ತನೆಯಿಂದ ನಟಿಗೆ ಮುಜುಗರವಾಗಿದೆ” ಎಂದು ಮತ್ತೊಬ್ಬರು ಕಮೆಂಟ್‌ ಮಾಡಿದ್ದಾರೆ. ಇದೊಂದು ರೀತಿಯ ಲೈಂಗಿಕ ಕಿರುಕುಳವೆಂದು ಮತ್ತೊಬ್ಬರು ಟೀಕಿಸಿದ್ದಾರೆ.

ಮನ್ನಾರಾ ಚೋಪ್ರಾ ಪ್ರಿಯಾಂಕಾ ಚೋಪ್ರಾ ಮತ್ತು ಪರಿಣಿತಿ ಚೋಪ್ರಾ ಅವರ ಸೋದರಸಂಬಂಧಿ. ನಟಿ 2014 ರ ತೆಲುಗು ಚಿತ್ರ ʼಪ್ರೇಮ ಗೀಮಾ ಜಂತ ನೈʼ ಮೂಲಕ ಪಾದಾರ್ಪಣೆ ಮಾಡಿದರು. ಅವರು ಜಿದ್ ಮತ್ತು ಫಗ್ಲಿ ಮುಂತಾದ ಬಾಲಿವುಡ್ ಚಲನಚಿತ್ರಗಳಲ್ಲಿ ನಟಿಸಿದ್ದಾರೆ ಮತ್ತು ಕೊನೆಯದಾಗಿ 2019 ರ ಚಲನಚಿತ್ರ ʼಸೀತಾ‌ʼದಲ್ಲಿ ಕಾಣಿಸಿಕೊಂಡಿದ್ದರು.‌

Leave a Reply

You May Have Missed

error: Content is protected !!