ಶಿಶಿಲ: ಏರ್ ಗನ್ ಹಿಡಿದು ರಾತ್ರಿ ವೇಳೆ ಅನುಮಾನಾಸ್ಪದವಾಗಿ ತಿರುಗಾಡುತ್ತಿದ್ದವರ ಬಂಧನ

ಶಿಶಿಲ: ಏರ್ ಗನ್ ಹಿಡಿದು ರಾತ್ರಿ ವೇಳೆ ಅನುಮಾನಾಸ್ಪದವಾಗಿ ತಿರುಗಾಡುತ್ತಿದ್ದವರ ಬಂಧನ

ಶಿಶಿಲ ಗ್ರಾಮದ ಹೇವಾಜೆ ಎಂಬಲ್ಲಿ ಮೀಯಾರು ರಕ್ಷಿತಾರಣ್ಯ ವ್ಯಾಪ್ತಿಯಲ್ಲಿ ಸೆ.4ರಂದು ಉಪ್ಪಿನಂಗಡಿ ವಲಯದ ಅರಣ್ಯ ಇಲಾಖೆ ಸಿಬ್ಬಂದಿಗಳು ರಾತ್ರಿ ವೇಳೆ ಗಸ್ತು ತಿರುಗುತ್ತಿದ್ದ ಸಂದರ್ಭದಲ್ಲಿ ಪುದುವೆಟ್ಟು ಗ್ರಾಮದ ಪಿಲಿಕಲ ಎಂಬಲ್ಲಿಯ ಪ್ರಮೋದ್(23) ಪ್ರಕಾಶ್ (22) ಎಂಬವರು ರಾತ್ರಿ ವೇಳೆ ಏರ್ ಗನ್ ಹಿಡಿದುಕೊಂಡು ಅನುಮಾನಾಸ್ಪದವಾಗಿ ತಿರುಗಾಡುತ್ತಿರುವುದು ಕಂಡುಬಂದಿದ್ದು ಗಸ್ತಿನಲ್ಲಿದ್ದ ಅರಣ್ಯ ಸಿಬ್ಬಂದಿಗಳು ಅವರನ್ನು ಬಂಧಿಸಿ ಏರ್ ಗನ್ ಮತ್ತು ಬೈಕನ್ನು ವಶಪಡಿಸಿಕೊಂಡಿದ್ದಾರೆ.

ಉಪ್ಪಿನಂಗಡಿ ವಲಯ ಅರಣ್ಯಾಧಿಕಾರಿ ಜಯಪ್ರಕಾಶ್ ಕೆ.ಕೆ ಮಾರ್ಗದರ್ಶನದಲ್ಲಿ ಕಳೆಂಜ ಶಾಖಾ ಉಪವಲಯ ಅರಣ್ಯಾಧಿಕಾರಿ ಪ್ರಶಾಂತ್, ಭರತ್, ಅರಣ್ಯ ಪಾಲಕ ಸನತ್, ವಿನಯಚಂದ್ರ, ರಾಜೇಶ್, ಲಿಂಗಪ್ಪ, ಸುನಿಲ್ ನಾಯ್ಕ್ ಚಾಲಕ ಕಿಶೋರ್ ಕಾರ್ಯಾಚರಣೆ ನಡೆಸಿದರು.

Leave a Reply

You May Have Missed

error: Content is protected !!