ಶ್ರೀರಾಮಕುಂಜೇಶ್ವರ ಪದವಿ ಪೂರ್ವ ಕಾಲೇಜು ಮತ್ತು ಪ್ರೌಢಶಾಲೆಯಲ್ಲಿ ಶಿಕ್ಷಕರ ದಿನಾಚರಣೆ

ಶ್ರೀರಾಮಕುಂಜೇಶ್ವರ ಪದವಿ ಪೂರ್ವ ಕಾಲೇಜು ಮತ್ತು ಪ್ರೌಢಶಾಲೆಯಲ್ಲಿ ಶಿಕ್ಷಕರ ದಿನಾಚರಣೆ

ಶ್ರೀರಾಮಕುಂಜೇಶ್ವರ ಪದವಿ ಪೂರ್ವ ಕಾಲೇಜು ಮತ್ತು ಪ್ರೌಢಶಾಲೆಯಲ್ಲಿ ಶಿಕ್ಷಕರ ದಿನಾಚರಣೆಯು ನಡೆಯಿತು.

ಸಂಪನ್ಮೂಲ ವ್ಯಕ್ತಿಯಾಗಿ ಸೈಂಟ್ ಅನ್ಸ್ ಡಿ.ಎಡ್ ಕಾಲೇಜಿನ ಗೌರವ ಕನ್ನಡ ಉಪನ್ಯಾಸಕರಾದ ಉಮೇಶ್ ಕಾರಂತ “ಶಿಕ್ಷಕರ ದಿನಾಚಣೆಯಂದು ನಾವು ಮಹತ್ವವಾದ ವಿಚಾರಗಳನ್ನು ತಿಳಿದುಕೊಳ್ಳಬೇಕಾಗಿದೆ. ವಿದ್ಯಾರ್ಥಿಗಳು ಸಚ್ಚಾರಿತ್ರ್ಯವನ್ನ, ಸದಾಚಾರವನ್ನು ಹೊಂದಿ ದೇಶದ ಸತ್ಪ್ರಜೆ ಬಾಳಬೇಕು. ಇದಕ್ಕೆ ಗುರುಗಳ ಮಾರ್ಗದರ್ಶನ ಅಗತ್ಯ. ಶಿಕ್ಷಕರನ್ನು ಸದಾ ಗೌರವಿಸುತ್ತಾ ಸ್ಮರಿಸುತ್ತಾ ಅವರ ಮಾರ್ಗದರ್ಶನ ಪಡೆಯುತ್ತಿದ್ದರೆ ವಿದ್ಯಾರ್ಥಿಗಳು ಮುಂದೆ ಗುರುಗಳೇ ಆಗುತ್ತಾರೆ. ಸಂಸ್ಕಾರ ಅವರಲ್ಲಿ ಬೆಳಗುತ್ತದೆ” ಎಂದು ಹೇಳಿದರು.

ಸಂಸ್ಥೆಯ ಕಾರ್ಯದರ್ಶಿಗಳಾದ ರಾಧಾಕೃಷ್ಣ ಕೆ ಎಸ್ ಅವರು ಮಾತನಾಡುತ್ತಾ” ಶಿಕ್ಷಕರ ತ್ಯಾಗ ಮನೋಭಾವನೆ ವಿದ್ಯಾರ್ಥಿಗಳನ್ನು ಸದಾ ಕಾಲ ಯಶಸ್ಸಿನ ಕಡೆಗೆ ತಗೊಂಡು ಹೋಗುತ್ತದೆ. ಶಿಕ್ಷಕರನ್ನ ನೋಡಿ ವಿದ್ಯಾರ್ಥಿಗಳು ಕಲಿಯುತ್ತಾರೆ. ಇಂತಹ ಶ್ರೇಷ್ಠ ಗುಣಗಳನ್ನ ಮೈಗೂಡಿಸಿಕೊಂಡಿರುವ ಎಲ್ಲ ಶಿಕ್ಷಕರನ್ನು ಸ್ಮರಿಸುವಂತದ್ದು ನಮ್ಮೆಲ್ಲರ ಕರ್ತವ್ಯ” ಎಂದು ಹೇಳಿದರು.
ಕಾಲೇಜು ವಿದ್ಯಾರ್ಥಿ ತನ್ಸಿಫ್ ಮತ್ತು ಪ್ರೌಢಶಾಲೆಯ ಶ್ರವಣ್ ಶಿಕ್ಷಕರ ದಿನಾಚರಣೆಯ ಕುರಿತಾಗಿ ಭಾಷಣವನ್ನು ಮಾಡಿದರು.
ವೇದಿಕೆಯಲ್ಲಿಪ್ರಾಂಶುಪಾಲರಾದ ಚಂದ್ರಶೇಖರ್ ಕೆ ಮತ್ತು ಮುಖ್ಯ ಗುರುಗಳಾದ ಸತೀಶ್ ಭಟ್ ಉಪಸ್ಥಿತರಿದ್ದರು. ಅಧ್ಯಾಪಕ- ಅಧ್ಯಾಪಕೇತರ ವೃಂದದವರಿಗೆ ಗುಲಾಬಿಯನ್ನು ನೀಡಿ ಗೌರವಿಸಲಾಯಿತು. ಕಾಲೇಜಿನ ಆಡಳಿತ ಮಂಡಳಿಯ ಸದಸ್ಯರಾದ ಲಕ್ಷ್ಮಿನಾರಾಯಣ ರಾವ್ ಅತೂರು ಸ್ವಾಗತಿಸಿದರು. ಹರ್ಷ ಮತ್ತು ಬಳಗ ಪ್ರಾರ್ಥಿಸಿದರು. ಕಾಲೇಜು ವಿದ್ಯಾರ್ಥಿನಿ ಶ್ರೀರಕ್ಷಾ ವಂದಿಸಿದರು. ದ್ವಿತೀಯ ವಿಜ್ಞಾನ ವಿಭಾಗದ ವಿದ್ಯಾರ್ಥಿನಿ ಚಿನ್ಮಯಿ ಕಾರ್ಯಕ್ರಮ ನಿರೂಪಿಸಿದರು.

Leave a Reply

You May Have Missed

error: Content is protected !!