ಸುಬ್ರಹ್ಮಣ್ಯ: ಮೊಸರು ಕುಡಿಕೆ ಕಂಬಕ್ಕೆ ಗ್ರೀಸ್‌ ಹಚ್ಚುತಿದ್ದ ವೇಳೆ ಕಂಬದಿಂದ ಬಿದ್ದು ಯುವಕನಿಗೆ ಗಾಯ

ಸುಬ್ರಹ್ಮಣ್ಯ: ಮೊಸರು ಕುಡಿಕೆ ಕಂಬಕ್ಕೆ ಗ್ರೀಸ್‌ ಹಚ್ಚುತಿದ್ದ ವೇಳೆ ಕಂಬದಿಂದ ಬಿದ್ದು ಯುವಕನಿಗೆ ಗಾಯ

ಸುಬ್ರಹ್ಮಣ್ಯ: ಅಷ್ಟಮಿ ಕಾರ್ಯಕ್ರಮಕ್ಕೆ ಮೊಸರು ಕುಡಿಕೆ ಕಂಬ ಸ್ಥಾಪನೆ ವೇಳೆ ಯುವಕನೊಬ್ಬ ಕಂಬದಿಂದ ಬಿದ್ದು ಗಾಯಗೊಂಡ ಘಟನೆ ಹಾಗೂ ಬಳಿಕ ಕಾರ್ಯಕ್ರಮ ಸ್ಥಗಿತಗೊಳಿಸಿದ ಘಟನೆ ರವಿವಾರ ಕಡಬ ತಾಲೂಕಿನ ಐನೆಕಿದುವಿನಲ್ಲಿ ಸಂಭವಿಸಿದೆ.

ಮೊಸರು ಕುಡಿಕೆ ಕಂಬ ನಿಲ್ಲಿಸಿ ಕಂಬಕ್ಕೆ ಹತ್ತಿ ಭರತ್‌ ಎನ್ನುವವರು ಗ್ರೀಸ್‌ ಹಚ್ಚುತಿದ್ದ ವೇಳೆ ಕಂಬದಿಂದ ಆಯ ತಪ್ಪಿ ಕೆಳಗೆ ಬಿದ್ದು, ಗಾಯಗೊಂಡಿದ್ದರು. ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ. ಘಟನೆಯ ಬಳಿಕ ಸಂಘಟಕರು ಅಷ್ಟಮಿ ಕಾರ್ಯಕ್ರಮವನ್ನು ರದ್ದು ಗೊಳಿಸಿದರು.

Leave a Reply

You May Have Missed

error: Content is protected !!