ಸುಬ್ರಹ್ಮಣ್ಯ ಪಿಗ್ಮಿ ಕಲೆಕ್ಟರ್‌ ಕುಸಿದು ಬಿದ್ದು ಸಾವು

ಸುಬ್ರಹ್ಮಣ್ಯ ಪಿಗ್ಮಿ ಕಲೆಕ್ಟರ್‌ ಕುಸಿದು ಬಿದ್ದು ಸಾವು

ಸುಬ್ರಹ್ಮಣ್ಯ ಆದರ್ಶ ವಿವಿಧೋದ್ದೇಶ ಸಹಕಾರಿ ಸಂಘದ ಪಿಗ್ಮಿ ಕಲೆಕ್ಟರ್‌ ಕೇನ್ಯ ಗ್ರಾಮದ ಚಾಲ್ಯಾರು ದಿ| ಅಮ್ಮು ಶೆಟ್ಟಿ ಅವರ ಪುತ್ರ ಸುಬ್ಬಯ್ಯ ಶೆಟ್ಟಿ (47) ಸೋಮವಾರ ರಾತ್ರಿ ಕುಸಿದು ಬಿದ್ದು ಮೃತಪಟ್ಟಿದ್ದಾರೆ.

ರಾತ್ರಿಯಾದರೂ ಸುಬ್ಬಯ್ಯ ಮನೆಗೆ ತಲುಪಿಲ್ಲವೆಂದು ಮನೆಯವರು ಹುಡುಕಲು ಹೊರಟಾಗ ದಾರಿಯಲ್ಲಿ ಬಿದ್ದಿರುವುದು ಕಂಡುಬಂತು. ಆಸ್ಪತ್ರೆಗೆ ಕರೆದೊಯ್ದಾಗ ಅವರು ಮೃತಪಟ್ಟಿರು ವುದಾಗಿ ವೈದ್ಯರು ತಿಳಿಸಿದರು.

ಸುಬ್ಬಯ್ಯ ಅನೇಕ ವರ್ಷಗಳಿಂದ ಸುಬ್ರಹ್ಮಣ್ಯ ಆದರ್ಶ ಸೊಸೈಟಿಯ ಪಿಗ್ಮಿ ಕಲೆಕ್ಟರ್‌ ಆಗಿ ಕೆಲಸ ಮಾಡುತ್ತಿದ್ದು ಪಂಜ, ಸುಬ್ರಹ್ಮಣ್ಯ ಪರಿಸರದಲ್ಲಿ ಚಿರಪರಿಚಿತರಾಗಿದ್ದರು.

Leave a Reply

You May Have Missed

error: Content is protected !!