ಪಶುವೈದ್ಯಾಧಿಕಾರಿ ಬೈಕ್‌ ಕಳವು; ದೂರು ದಾಖಲು

ಪಶುವೈದ್ಯಾಧಿಕಾರಿ ಬೈಕ್‌ ಕಳವು; ದೂರು ದಾಖಲು

ಬೆಳ್ತಂಗಡಿ ಪಶುವೈದ್ಯಾಧಿಕಾರಿ ಅವರ ಶೆಡ್‌ನ‌ಲ್ಲಿ ನಿಲ್ಲಿಸಿದ್ದ ಬೈಕ್‌ನ್ನು ಎಗರಿಸಿದ ಘಟನೆ ಸೆ. 12ರಂದು ನಡೆದಿದೆ.

ಬೆಳಂಗಡಿ ಪಶುವೈದ್ಯಾಧಿಕಾರಿ ಡಾ| ಟಿ.ಸಿ.ಮಂಜಾ ನಾಯ್ಕ ಎಂದಿನಂತೆ ಪಶು ಆಸ್ಪತ್ರೆಯ ಶೆಡ್‌ನ‌ಲ್ಲಿ ಬೈಕ್‌ ನಿಲ್ಲಿಸಿ ತೆರಳಿದ್ದರು. ಮುಂಜಾನೆ ಬೈಕ್‌ನಲ್ಲಿರಿಸಿದ್ದ ಕೀ ಕಾಣೆಯಾಗಿತ್ತು. ಕೀ ಕಳೆದುಹೋಗಿರಬಹುದೇನೋ ಎಂದು ಅನುಮಾನಗೊಂಡಿದ್ದರು. ಆದರೆ ರಾತ್ರಿ ಬಂದು ನೋಡಿದಾಗ ಬೈಕ್‌ ಕಾಣೆಯಾಗಿರುವುದು ತಿಳಿದು ಬಂದಿದೆ.

ಬೈಕಿನ ಮೌಲ್ಯ 35,000 ರೂ. ಎಂದು ಅಂದಾಜಿಸಲಾಗಿದ್ದು, ಬೆಳ್ತಂಗಡಿ ಠಾಣೆಯಲ್ಲಿ ದೂರು ದಾಖಲಾಗಿದೆ.

Leave a Reply

You May Have Missed

error: Content is protected !!