ಮೋಟರ್ ಸೈಕಲ್ ಕಳ್ಳತನ; ಕ್ಷೀಪ್ರ ಕಾರ್ಯಾಚರಣೆ; ಆರೋಪಿಯನ್ನು ವಶಕ್ಕೆ ಪಡೆದ ಸುಳ್ಯ ಪೊಲೀಸರು

ಮೋಟರ್ ಸೈಕಲ್ ಕಳ್ಳತನ; ಕ್ಷೀಪ್ರ ಕಾರ್ಯಾಚರಣೆ; ಆರೋಪಿಯನ್ನು ವಶಕ್ಕೆ ಪಡೆದ ಸುಳ್ಯ ಪೊಲೀಸರು

ಸುಳ್ಯ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮೋಟರ್ ಸೈಕಲ್ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಸೆ.16ರಂದು ಪ್ರಕರಣ ಠಾಣೆಯಲ್ಲಿ ದಾಖಲಾಗಿದ್ದು.

ಸುಳ್ಯ ಠಾಣಾ ಪೊಲೀಸ್ ಉಪನಿರೀಕ್ಷಕರು ಮತ್ತು ಸಿಬ್ಬಂದಿಗಳ ತಂಡ ಕ್ಷೀಪ್ರ ಕಾರ್ಯಾಚರಣೆ ನಡೆಸಿ ಕೊಡಗು ಸೋಮವಾರಪೇಟೆ ಬಸವನಹಳ್ಳಿ ನಿವಾಸಿಯಾದ ಆರೋಪಿ ಸುಬ್ರಮಣಿ (26) ಎಂಬಾತನನ್ನು ಪ್ರಕರಣ ವರದಿಯಾದ ಕೆಲವೇ ಗಂಟೆಗಳಲ್ಲಿ ಸುಳ್ಯ ತಾಲೂಕು ಆಲಟ್ಟಿ ಗ್ರಾಮದ ಸರಳಿಪಂಜ ಎಂಬಲ್ಲಿ ಪತ್ತೆ ಮಾಡಿ ವಶಕ್ಕೆ ಪಡೆದು ನ್ಯಾಯಾಲಯಕ್ಕೆ ಹಾಜರು ಪಡಿಸಿದರು.

ಆರೋಪಿ ಈ ಹಿಂದೆ ನಾಪೋಕ್ಲು ಪೊಲೀಸ್ ಠಾಣೆಯಲ್ಲಿ ಹಾಗೂ ಹುಣಸೂರು ನಗರ ಪೊಲೀಸ್ ಠಾಣೆಯಲ್ಲಿ ಹಲವಾರು ಪ್ರಕರಣಗಳಲ್ಲಿ ಭಾಗಿಯಾಗಿರುತ್ತಾನೆ. ಇದಲ್ಲದೆ ಕೆಲ ದಿನಗಳ ಹಿಂದೆ ಸುಳ್ಯ ಬಸ್ ನಿಲ್ದಾಣದಲ್ಲಿ ಬಿದ್ದಿದ್ದ ವ್ಯಕ್ತಿಯೊಬ್ಬರ ಪರ್ಸ್ ತೆಗೆದುಕೊಂಡು ಹೋಗಿದ್ದು ತನಿಖೆ ವೇಳೆ ತಿಳಿದುಬಂದಿರುತ್ತದೆ.

Leave a Reply

You May Have Missed

error: Content is protected !!