ಚೈತ್ರಾ ಕುಂದಾಪುರಳ 3 ದಿನಗಳ ಆಸ್ಪತ್ರೆ ನಾಟಕ ಬಂದ್ – ಆಸ್ಪತ್ರೆಯಿಂದ ಡಿಸ್ಚಾರ್ಜ್‌

ಚೈತ್ರಾ ಕುಂದಾಪುರಳ 3 ದಿನಗಳ ಆಸ್ಪತ್ರೆ ನಾಟಕ ಬಂದ್ – ಆಸ್ಪತ್ರೆಯಿಂದ ಡಿಸ್ಚಾರ್ಜ್‌

ವಿಚಾರಣೆ ಸಂದರ್ಭದಲ್ಲಿ ಪ್ರಜ್ಞೆ ತಪ್ಪಿ ಕುಸಿದು ಬಿದ್ದು, ಕಳೆದ ಮೂರು ದಿನಗಳಿಂದ ಆಸ್ಪತ್ರೆಗೆ ದಾಖಲಾಗಿದ್ದ ವಂಚನೆ ಪ್ರಕರಣದ ಪ್ರಮುಖ ಆರೋಪಿ ಚೈತ್ರಾ ಕುಂದಾಪುರಳನ್ನ ವಿಕ್ಟೋರಿಯಾ ಆಸ್ಪತ್ರೆಯಿಂದ ಡಿಸ್ಚಾರ್ಜ್‌ ಮಾಡಲಾಗಿದೆ.

ಸತತ ವೈದ್ಯಕೀಯ ತಪಾಸಣೆ ನಂತರ ಎಲ್ಲಾ ವರದಿಗಳು ನಾರ್ಮಲ್‌ ಬಂದಿರುವ ಹಿನ್ನೆಲೆಯಲ್ಲಿ ಆಸ್ಪತ್ರೆಯಿಂದ ಡಿಸ್ಚಾರ್ಜ್‌ ಮಾಡಿದ್ದು, ಅಲ್ಲಿಂದ ನೇರವಾಗಿ ಪೊಲೀಸರು ಸಿಸಿಬಿ ಕಚೇರಿಗೆ ಕರೆತಂದಿದ್ದಾರೆ. ಚೈತ್ರಾಳ ತಲೆ ಹಾಗೂ ಮುಖಕ್ಕೆ ಮಾಸ್ಕ್‌ ಕಟ್ಟಿಸಿ ಆಸ್ಪತ್ರೆ ಹಿಂಬಾಗಿಲಿನಿಂದ ಪೊಲೀಸರು ಕರೆ ತಂದಿದ್ದಾರೆ.

ಇಂದಿನಿಂದಲೇ ವಿಚಾರಣೆ ನಡೆಸಲು ಎಲ್ಲಾ ಹಂತದ ಸಿದ್ಧತೆ ಮಾಡಿಕೊಂಡಿದ್ದಾರೆ. ಐದಾರು ದಿನಗಳ ಕಾಲ ಕಸ್ಟಡಿಯಲ್ಲಿ ವಿಚಾರಣೆ ನಡೆಸಿ, ನಂತರ ಸ್ಥಳ ಮಹಜರು ನಡೆಸಬೇಕು. ಬಳಿಕ ಉಳಿದ ಆರೋಪಿಗಳನ್ನೂ ಚೈತ್ರಾಳ ಮುಖಾಮುಖಿಯಾಗಿ ಕೂರಿಸಿ ವಿಚಾರಣೆ ನಡೆಸಲು ಪೊಲೀಸರು ಸಿದ್ಧತೆ ಮಾಡಿಕೊಂಡಿದ್ದಾರೆ.

Leave a Reply

You May Have Missed

error: Content is protected !!