ಕೊಕ್ಕಡ: ನೈಮಿಷ ಹೌಸ್ ಆಫ್ ಸ್ಪೈಸಸ್ ನವರ ನೂತನ ಉತ್ಪನ್ನ “ಕೋಕೋ ಡ್ಯೂ” ಲೋಕಾರ್ಪಣೆ

ಕೊಕ್ಕಡ: ನೈಮಿಷ ಹೌಸ್ ಆಫ್ ಸ್ಪೈಸಸ್ ಸಂಸ್ಥೆಯವರು “ಕೋಕೋ ಡ್ಯೂ” ಎಂಬ ಹೆಸರಿನ ನೂತನ ಉತ್ಪನ್ನವನ್ನು ಸೌತಡ್ಕ ದೇವರ ಸನ್ನಿದಿಯಲ್ಲಿ ದೇವಳದ ಪ್ರಧಾನ ಅರ್ಚಕರಾದ ಸತ್ಯಪ್ರಿಯ ಕಲ್ಲುರಾಯರು ಲೋಕಾರ್ಪಣೆಗೊಳಿಸಿದರು.

“ಕೋಕೋ ಡ್ಯೂ” ಶುದ್ಧ ಗಾಣದ ಕೊಬ್ಬರಿ ಎಣ್ಣೆಯಾಗಿದೆ
ಈ ಸಂಧರ್ಭದಲ್ಲಿ ನೈಮಿಷ ಹೌಸ್ ಆಫ್ ಸ್ಪೈಸಸ್ ನ ಮಾಲಕರಾದ ಬಾಲಕೃಷ್ಣ ನೈಮಿಷ ಅವರ ಧರ್ಮಪತ್ನಿ ರಿಂಕಾ, ಪುತ್ರ ಮಾಸ್ಟರ್ ವಿಖ್ಯಾತ್ ಹಾಗೂ ಗೋಪಾಲನ್ ಅಡೂರ್, ಚಂದ್ರನ್ ಬಿ.ಸಿ ಪ್ರೊಪರೇಟರ್ ಕೈರಾಲಿ ಮ್ಯಾನುಫ್ಯಾಕ್ಚರಿಂಗ್ ಯೂನಿಟ್ ಕಾಸರಗೋಡು, ಮನೋಜ್ ಕೈರಾಲಿ ಮ್ಯಾನುಫ್ಯಾಕ್ಚರಿಂಗ್ ಯೂನಿಟ್ ಕಾಸರಗೋಡು, ಅಭಿಷೇಕ್ ಮೋಹನ್ ಕಾಸರಗೋಡು ಉಪಸ್ಥಿತರಿದ್ದರು.
ಮಿತ ದರದಲ್ಲಿ ಆರೋಗ್ಯಕರವಾದ ಉತ್ತಮ ಗುಣಮಟ್ಟದ ಶುದ್ಧ ಗಾಣದ ಕೊಬ್ಬರಿ ಎಣ್ಣೆಯನ್ನು ತಯಾರಿಸಿ ಕೊಡುವುದೇ ನಮ್ಮ ಮುಖ್ಯ ಉದ್ದೇಶವಾಗಿದೆ. ನೂತನ ಉತ್ಪನ್ನದ ಸದುಪಯೋಗವನ್ನು ಪಡೆದುಕೊಂಡು ಪ್ರೋತ್ಸಾಹಿಸುವಂತೆ ಸಂಸ್ಥೆ ಮಾಲಕರಾದ
-ಬಾಲಕೃಷ್ಣ ನೈಮಿಷ ರವರು ತಿಳಿಸಿದರು.


















Leave a Reply