ಅಕ್ರಮ ಮರ ಸಾಗಾಟ; ಎರಡು ವಾಹನಗಳನ್ನು ವಶಪಡಿಸಿಕೊಂಡ ಅರಣ್ಯಾಧಿಕಾರಿಗಳು

ಅಕ್ರಮ ಮರ ಸಾಗಾಟ; ಎರಡು ವಾಹನಗಳನ್ನು ವಶಪಡಿಸಿಕೊಂಡ ಅರಣ್ಯಾಧಿಕಾರಿಗಳು

ಅಕ್ರಮವಾಗಿ ಮರ ಸಾಗಾಟ ಮಾಡುತ್ತಿದ್ದ ಆಲೆಟ್ಟಿ ಗ್ರಾಮದ ಪೈಂಬೆಚ್ಚಾಲ್‌ ಭಾಗದಿಂದ ಎರಡು ವಾಹನಗಳನ್ನು ಮಂಗಳವಾರ ರಾತ್ರಿ ಸುಳ್ಯ ಅರಣ್ಯಾಧಿಕಾರಿಗಳು ಪೈಂಬೆಚ್ಚಾಲು ಸಮೀಪ ವಶಪಡಿಸಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.

ಅಕ್ರಮವಾಗಿ ಮರ ಸಾಗಾಟ ಮಾಡುತ್ತಿರುವ ಖಚಿತ ಮಾಹಿತಿಯ ಮೇರೆಗೆ ಅರಣ್ಯ ಅಧಿಕಾರಿಗಳು ಕಾದು ನಿಂತು ಮರಗಳನ್ನು ಸಾಗಾಟ ಮಾಡುತ್ತಿದ್ದ ಒಂದು ಮಿನಿ ಲಾರಿ ಹಾಗೂ ಒಂದು ಪಿಕಪ್‌ ವಾಹನವನ್ನು ವಶಕ್ಕೆ ಪಡೆದುಕೊಂಡಿದ್ದಾರೆ ಎನ್ನಲಾಗಿದೆ.

ವಾಹನ ಮತ್ತು ಮರದ ಜತೆಗೆ ಮರಸಾಗಾಟ ಮಾಡುತ್ತಿದ್ದವರನ್ನು ಅರಣ್ಯ ಅಧಿಕಾರಿಗಳು ಬಂಧಿಸಿರುವುದಾಗಿಯೂ ತಿಳಿದು ಬಂದಿದೆ.

Leave a Reply

You May Have Missed

error: Content is protected !!