ಆತ್ಮಹತ್ಯೆಗೆ ಯತ್ನಿಸಿದ ಯುವಕ ಮೃತ್ಯು

ಆತ್ಮಹತ್ಯೆಗೆ ಯತ್ನಿಸಿದ ಯುವಕ ಮೃತ್ಯು

ವಿಷ ಸೇವಿಸಿ ಆತ್ಮಹತ್ಯೆಗೆ ಪ್ರಯತ್ನಿಸಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಯುವಕ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟ ಘಟನೆ ಸೋಣಂದೂರಿನಲ್ಲಿ ನಡೆದಿದೆ.

ಮೃತ ಯುವಕ ಸೋಣಂದೂರು ಮುಂಡಾಡಿ ಮನೆ ನಿವಾಸಿಯಾಗಿರುವ ಪ್ರಶಾಂತ್‌ ಎಂಬವರಾಗಿದ್ದಾರೆ.

ಈತ ಸೆ.18 ರಂದು ರಾತ್ರಿಯ ವೇಳೆ ಮನೆಯಲ್ಲಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದ ಕೂಡಲೇ ಮನೆಯವರು ಆತನನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಿದ್ದರು. ಆದರೆ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾನೆ.

ಘಟನೆಯ ಬಗ್ಗೆ ಮೃತನ ಸಂಬಂಧಿಯಾಗಿರುವ ಪ್ರತೀಕ್‌ ನೀಡಿರುವ ದೂರಿನಂತೆ ಪೂಂಜಾಲಕಟ್ಟೆ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

Leave a Reply

You May Have Missed

error: Content is protected !!