ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಅಮೈ ಮಹಾಲಿಂಗ ನಾಯ್ಕ್ ಅವರ ಮನೆಗೆ ಶಾಸಕರು ಭೇಟಿ-ಸನ್ಮಾನ

ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಅಮೈ ಮಹಾಲಿಂಗ ನಾಯ್ಕ್ ಅವರ ಮನೆಗೆ ಶಾಸಕರು ಭೇಟಿ-ಸನ್ಮಾನ

ನೇಸರ ಜ.27: ಪದ್ಮಶ್ರೀ ಪುರಸ್ಕೃತ ಅಮೈ ಮಹಾಲಿಂಗ ನಾಯ್ಕ್ ಅವರ ಮನೆಗೆ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಹಾಗೂ ಪುತ್ತೂರು ಶಾಸಕ ಸಂಜೀವ ಮಠಂದೂರು ಭೇಟಿ ನೀಡಿ ಮಹಾಲಿಂಗ ನಾಯ್ಕರನ್ನು ಸನ್ಮಾನಿಸಿದರು.
ರೈತರು ದೇಶದಲ್ಲಿ ನೀರಿಗಾಗಿ ಹೋರಾಟ ಮಾಡುವುದನ್ನು ನೋಡಿದ್ದೇವೆ.ತನಗೆ ಬೇಕಾದ ನೀರನ್ನು ತಾನೇ ಶೋಧಿಸಿ ಜಗತ್ತಿಗೆ ತೋರಿಸಿರುವುದು ಮತ್ತು ಕೇಂದ್ರ ಸರ್ಕಾರ ಇವರನ್ನು ಗುರುತಿಸಿರುವುದು ಜಿಲ್ಲೆಗೆ ಸಂದ ಗೌರವ ಎಂದು ರಾಜೇಶ್ ನಾಯ್ಕ್ ಹೇಳಿದರು.ಪುತ್ತೂರು ಶಾಸಕ ಸಂಜೀವ ಮಠಂದೂರು ಮಾತನಾಡಿ,ತನ್ನದೇ ಆದ ಕಲ್ಪನೆಯ ಮೂಲಕ ಕೃಷಿಜಗತ್ತಿಗೆ ಹೊಸದನ್ನು ಪರಿಚಯಿಸಿದ ಕಾಯಕಯೋಗಿ ಮಹಾಲಿಂಗ ನಾಯ್ಕರಿಂದ ಇನ್ನಷ್ಟು ಸಲಹೆ ಮಾರ್ಗದರ್ಶನಗಳು ರೈತರಿಗೆ ಸಿಗುವಂತಾಗಲಿ ಎಂದು ಹೇಳಿದರು.‌ಜನ ಪ್ರತಿನಿಧಿಗಳು, ಮುಖಂಡರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Leave a Reply

You May Have Missed

error: Content is protected !!