ಭಾರತೀಯ ಜನತಾ ಪಾರ್ಟಿ ಬೆಳ್ತಂಗಡಿ ಮಂಡಲದ ವತಿಯಿಂದ ಗೌರವಾರ್ಪಣಾ ಕಾರ್ಯಕ್ರಮ

ಭಾರತೀಯ ಜನತಾ ಪಾರ್ಟಿ ಬೆಳ್ತಂಗಡಿ ಮಂಡಲದ ವತಿಯಿಂದ ಗೌರವಾರ್ಪಣಾ ಕಾರ್ಯಕ್ರಮ

ನೇಸರ 23: ಭಾರತೀಯ ಜನತಾ ಪಾರ್ಟಿ ಬೆಳ್ತಂಗಡಿ ಮಂಡಲದ ವತಿಯಿಂದ ದೇಶದಲ್ಲಿ 100 ಕೋಟಿಗೂ ಅಧಿಕ ವ್ಯಾಕ್ಸಿನೇಷನ್ ಉಚಿತವಾಗಿ ನೀಡಿದ ಪ್ರಧಾನ ಮಂತ್ರಿ ನರೇಂದ್ರ ಮೋದಿಜಿಯವರಿಗೆ ಹಾಗೂ ಕೊಕ್ಕಡ ಸಮುದಾಯ ಅರೋಗ್ಯ ಕೇಂದ್ರದ ವ್ಯಾಪ್ತಿಯಲ್ಲಿ ಬರುವ 18 ವರ್ಷ ಮೇಲ್ಪಟ್ಟ ಎಲ್ಲರಿಗೂ ವ್ಯಾಕ್ಸಿನ್ ನೀಡುವಲ್ಲಿ ಶ್ರಮಿಸಿದ ಅರೋಗ್ಯ ಇಲಾಖಾ ಅಧಿಕಾರಿಗಳ ಗೌರವಾರ್ಪಣಾ ಕಾರ್ಯಕ್ರಮವು ಕೊಕ್ಕಡ ಸಮುದಾಯ ಅಸ್ಪತ್ರೆಯಲ್ಲಿ ನಡೆಯಿತು. ಕಾರ್ಯಕ್ರಮದ ವೇದಿಕೆಯಲ್ಲಿ ಕೊಕ್ಕಡ ಸಮುದಾಯ ಅಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ.ಪೂಜಾ, ಸೇವಾ ಸಹಕಾರಿ ಬ್ಯಾಂಕ್‍ನ ಅಧ್ಯಕ್ಷ ಕುಶಾಲಪ್ಪ ಗೌಡ ಪೂವಾಜೆ, ಬಿಜೆಪಿ ಧರ್ಮಸ್ಥಳ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಯೋಗಿಶ್ ಅಲಂಬಿಲ, ಜನಾರ್ದನ ಕೆ.ಪಿ, ಗಿರೀಶ್ ನಿಡ್ಲೆ, ಪ್ರವೀಣ್ ಹೆಬ್ಬಾರ್ ನಿಡ್ಲೆ ಹಾಗೂ ಯತೀಶ್ ಶೆಟ್ಟಿ ಇವರು ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದರು

Leave a Reply

You May Have Missed

error: Content is protected !!