ನೆಲ್ಯಾಡಿ: ರಕ್ತದಾನ ಶಿಬಿರ

ನೆಲ್ಯಾಡಿ: ರಕ್ತದಾನ ಶಿಬಿರ

ನೆಲ್ಯಾಡಿ: ಕರ್ನಾಟಕ ಸರಕಾರ ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆ, ಉಪ್ಪಿನಂಗಡಿ ಸರಕಾರಿ ಪ್ರಥಮ ದರ್ಜೆ ಕಾಲೇಜು ನ ಸಮಾಜ ಕಾರ್ಯ ವಿಭಾಗ ಮತ್ತು ನೆಲ್ಯಾಡಿ ಗ್ರಾಮ ಪಂಚಾಯತ್ ಇವರ ಆಶ್ರಯದಲ್ಲಿ ಇಂಡಿಯನ್ ರೆಡ್ ಕ್ರಾಸ್ ಸೊಸೈಟಿ ಬ್ಲಡ್ ‌ಬ್ಯಾಂಕ್ ಲೇಡಿಗೋಶನ್ ಆಸ್ಪತ್ರೆ ಮಂಗಳೂರು ಇವರ ಸಹಯೋಗದೊಂದಿಗೆ ಅ.4ರಂದು ನೆಲ್ಯಾಡಿ ಎಲೈಟ್ ಹಾಲ್ ನಲ್ಲಿ ರಕ್ತದಾನ ಶಿಬಿರ ನಡೆಯಿತು.

ದ.ಕ. ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ, ಸಮಾಜ ಸೇವಕ ಗಂಗಾಧರ ಶೆಟ್ಟಿಯವರು ರಕ್ತದಾನ ಮಾಡಿ ಬಳಿಕ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿ ಮಾತನಾಡಿದ ಅವರು, ನಾವು ಕೊಡುವ ರಕ್ತ ಮೂರು ಜನರ ಜೀವ ಉಳಿಸಬಲ್ಲದು. ಪ್ರಾಣವನ್ನು ಉಳಿಸಬಲ್ಲದು, ಇಂಥ ಶಿಬಿರಗಳನ್ನು ಆ ಯೋಜನೆ ಮಾಡುವುದರಿಂದ, ರಕ್ತದಾನ ಮಾಡಲು ಪ್ರೇರೇಪಿಸಿದಂತಾಗುತ್ತದೆ, ಸಮಾಜಕ್ಕೂ ಈ ಶಿಬಿರದಿಂದ ಉಪಯುಕ್ತವಾಗಲಿದೆ, ಸಾಮಾಜಿಕ ಸಾಮರಸ್ಯವನ್ನು ಕಾಪಾಡಲು ಪೂರಕವಾಗಿರುತ್ತದೆ ಎಂದರು.

ಇಂಡಿಯನ್ ರೆಡ್ ಕ್ರಾಸ್ ಸೊಸೈಟಿ ಬ್ಲಡ್ ‌ಬ್ಯಾಂಕ್ ಲೇಡಿಗೋಶನ್ ಆಸ್ಪತ್ರೆ ಮಂಗಳೂರು, ಜಿಲ್ಲಾ ಸಂಯೋಜಕ ಪ್ರವೀಣ್ ಕುಮಾರ್ ರವರು ಮಾತನಾಡಿ ಇಲ್ಲಿ ಸಂಗ್ರಹಗೊಂಡ ರಕ್ತವನ್ನು ಉಚಿತವಾಗಿ ಪೂರೈಕೆ ಮಾಡುತ್ತೇವೆ. ದೇಶದ ಏಕತೆ, ಸಾಮರಸ್ಯಗೆ ರಕ್ತದಾನ ಶಿಬಿರ ನಡೆಯಬೇಕು ಎಂದರು.

ಉಪ್ಪಿನಂಗಡಿಯ ದಂತ ವೈದ್ಯ ಡಾ.ರಾಜಾರಾಮ್ ಕೆ.ಬಿ.ಅವರು ಮಾತನಾಡಿ ಆರೋಗ್ಯವಂತ ಪುರುಷ ವರ್ಷದಲ್ಲಿ ನಾಲ್ಕು ಸಲ ಹಾಗೂ ಮಹಿಳೆ ಮೂರು ಸಲ ರಕ್ತದಾನ ಮಾಡಬ‌ಹುದು. ರಕ್ತದಾನ ದಿಂದ ದೇಹದಲ್ಲಿನ ಕೊಲೆಸ್ಟ್ರಾಲ್ ಕಡಿಮೆ ಆಗಿ ಆರೋಗ್ಯವೂ ಉತ್ತಮಗೊಳ್ಳುತ್ತದೆ ಎಂದರು. ನೆಲ್ಯಾಡಿ ಗ್ರಾಮ ಪಂಚಾಯತ್ ಪಿಡಿಒ ಆನಂದ ಗೌಡ, ನೆಲ್ಯಾಡಿ ಎಲೈಟ್ ಇಂಡಸ್ಟ್ರೀಸ್ ನ ಮಾಲಕ ಶಾಜಿ ವರ್ಗೀಸ್, ಉಪ್ಪಿನಂಗಡಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಸಮಾಜ ಕಾರ್ಯ ವಿಭಾಗದ ಮುಖ್ಯಸ್ಥ ಡಾ. ನಂದೀಶ್ ವೈ.ಡಿ. ಅವರು ಸಂದರ್ಭೋಚಿತವಾಗಿ ಮಾತನಾಡಿದರು

ನೆಲ್ಯಾಡಿ ಗ್ರಾಮ ಪಂಚಾಯತ್ ಸದಸ್ಯ ಜಯಾನಂದ ಬಂಟ್ರಿಯಾಲ್, ಉಪ್ಪಿನಂಗಡಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಪ್ರೊ.ಸುಬ್ಬಪ್ಪ ಕೈಕಂಬ, ನೆಲ್ಯಾಡಿ ಜೇಸಿಐ ಅಧ್ಯಕ್ಷ ದಯಾಕರ ರೈ, ನೆಲ್ಯಾಡಿ ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ರೇಷ್ಮಾ ಶಶಿ, ಪಡುಬೆಟ್ಟು ವಿಷ್ಣುಮೂರ್ತಿ ಗೆಳೆಯರ ಬಳಗ ಅಧ್ಯಕ್ಷ ಶಿವಪ್ರಸಾದ್, ಸದಸ್ಯ ಸೋಮಶೇಖರ, ರಕ್ತದಾನಿ, ನೆಲ್ಯಾಡಿ ಸಿಟಿ ಫ್ರೆಂಡ್ಸ್ ಗೌರವಾಧ್ಯಕ್ಷ ರಹಿಮಾನ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ನೆಲ್ಯಾಡಿ ಗ್ರಾಮ ಪಂಚಾಯತ್ ಅಧ್ಯಕ್ಷ ಯಾಕೂಬ್ ಯಾನೆ ಸಲಾಂ ಬಿಲಾಲ್ ಅಧ್ಯಕ್ಷತೆ ವಹಿಸಿದ್ದರು.

ನೆಲ್ಯಾಡಿ ಹೊರಠಾಣೆ ಹೆಡ್ ಕಾನ್ಸ್ಟೇಬಲ್ ಕುಶಾಲಪ್ಪ ನಾಯ್ಕ, ಪಿಡಬ್ಲ್ಯುಡಿ ಗುತ್ತಿಗೆದಾರ ಶಿವಪ್ರಕಾಶ್, ನೆಲ್ಯಾಡಿ ಗ್ರಾಮ ಪಂಚಾಯತ್ ಸದಸ್ಯರಾದ ರವಿಪ್ರಸಾದ್ ಶೆಟ್ಟಿ, ಮೊಹಮ್ಮದ್ ಇಕ್ಬಾಲ್, ನೆಲ್ಯಾಡಿ ಗ್ರಾಮ ಪಂಚಾಯತ್ ಲೆಕ್ಕ ಸಹಾಯಕ ಅಂಗು, ಮತ್ತಿತರರು ಉಪಸ್ಥಿತರಿದ್ದರು.

ವಿದ್ಯಾರ್ಥಿಗಳಾದ ಅಶ್ವಿತಾ ಮತ್ತು ಸ್ವಾತಿ ಪ್ರಾರ್ಥಿಸಿದರು. ಸ್ವಾತಿ ಸ್ವಾಗತಿಸಿದರು. ಅಶ್ವಿತಾ ವಂದಿಸಿದರು. ಅನ್ವಿತಾ ನಿರೂಪಿಸಿದರು.

Leave a Reply

You May Have Missed

error: Content is protected !!