ಬಸ್ಸನ್ನೇರುತ್ತಿದ್ದ ವೇಳೆ ಯುವತಿಗೆ ಕಿರುಕುಳ; ಪ್ರಕರಣ ದಾಖಲು

ಬಸ್ಸನ್ನೇರುತ್ತಿದ್ದ ವೇಳೆ ಯುವತಿಗೆ ಕಿರುಕುಳ; ಪ್ರಕರಣ ದಾಖಲು

ಬಿ.ಸಿ.ರೋಡು ಬಸ್‌ ನಿಲ್ದಾಣದಲ್ಲಿ ಬಸ್ಸನ್ನೇರುತ್ತಿದ್ದ ವೇಳೆ ಆರೋಪಿಯೋರ್ವ ಯುವತಿಯೊಬ್ಬಳ ಜತೆ ಅನುಚಿತವಾಗಿ ವರ್ತಿಸಿ ಲೈಂಗಿಕ ಕಿರುಕುಳ ನೀಡಿದ ಘಟನೆ ಬುಧವಾರ ನಡೆದಿದೆ.

ಬಿ.ಸಿ.ರೋಡಿನಿಂದ ಮಂಗಳೂರು ಕಡೆಗೆ ತೆರಳುವ ಬಸ್‌ ಹತ್ತುವಾಗ ಘಟನೆ ನಡೆದಿದ್ದು, ಅನುಚಿತ ವರ್ತನೆಯ ಕುರಿತು ಯುವತಿ ಪ್ರಶ್ನಿಸಿದ ವೇಳೆ ಮುಂದೆಯೂ ಹೀಗೆ ಮಾಡುತ್ತೇನೆ, ಏನು ಮಾಡುತ್ತೀಯಾ ಎಂದು ಉಡಾಫೆ ಉತ್ತರ ನೀಡಿದನು. ಬಳಿಕ ಬಸ್‌ ಮಂಗಳೂರು ಬಲ್ಲಾಳ್‌ಬಾಗ್‌ ತಲುಪಿದಾಗ ಇಬ್ಬರು ಬಂದು ಆರೋಪಿಯನ್ನು ಕರೆದುಕೊಂಡು ಹೋಗಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಬಂಟ್ವಾಳ ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

You May Have Missed

error: Content is protected !!