ಹಿಂದೂ ಧಾರ್ಮಿಕ ಕಟ್ಟೆಯಲ್ಲಿ ನೆಟ್ಟ ಇಸ್ಲಾಂ ಧ್ವಜ ತೆರವು ಮಾಡಿದ ಪೊಲೀಸರು

ಹಿಂದೂ ಧಾರ್ಮಿಕ ಕಟ್ಟೆಯಲ್ಲಿ ನೆಟ್ಟ ಇಸ್ಲಾಂ ಧ್ವಜ ತೆರವು ಮಾಡಿದ ಪೊಲೀಸರು

ಮೂಡುಬಿದಿರೆ ತಾಲೂಕಿನ‌ ಪುಚ್ಚೆಮುಗೇರು ಗ್ರಾಮದಲ್ಲಿ ಹಿಂದೂ ಧಾರ್ಮಿಕ ಕಟ್ಟೆಯಲ್ಲಿ ಇಸ್ಲಾಂ ಧ್ವಜ ನೆಟ್ಟ ಘಟನೆ ನಡೆದಿದೆ.

ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಮೂಡಬಿದಿರೆ ಪೊಲೀಸರು ಧ್ವಜವನ್ನು ತೆರವು ಮಾಡಿದ್ದಾರೆ. ಈ ವೇಳೆ ಸರ್ಕಲ್ ಇನ್ಸ್‌ಪೆಕ್ಟರ್ ಸಂದೇಶ್​ ಎಂಬುವವರು ಪಂಚಾಯತ್ ಅನುಮತಿ ಪಡೆಯದೆ ಹಾಕಿರುವ ಧ್ವಜ ಇದಾಗಿದ್ದು, ಈ ಬಗ್ಗೆ ಪೊಲೀಸರ ಗಮನಕ್ಕೆ ತರದಿರುವುದಕ್ಕೆ ಪಿಡಿಒ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಜೊತೆಗೆ ಪಿಡಿಒ ಕರ್ತವ್ಯದ ಬಗ್ಗೆ ಎಚ್ಚರಿಕೆ ನೀಡಿದ್ದು, ನಿಮ್ಮ ಮೇಲೆ ಕೇಸ್ ಹಾಕೋದಾಗಿ ಎಚ್ಚರಿಸಿದ್ದಾರೆ. ಇನ್ನು ಗ್ರಾಮದಲ್ಲಿ ಅಹಿತಕರ ಘಟನೆಗೆ ಈ ಧ್ವಜ ಕಾರಣವಾಗುತ್ತಿತ್ತು. ಪೊಲೀಸರ ಸಕಾಲಿಕ ಕ್ರಮದಿಂದ ಪ್ರಕರಣ ತಿಳಿಯಾಗಿದೆ. ಇನ್ನು ಧ್ವಜ ನೆಟ್ಟವರ ಬಗ್ಗೆ ಪೊಲೀಸರು ಮಾಹಿತಿ ಕಲೆ ಹಾಕುತ್ತಿದ್ದಾರೆ.

Leave a Reply

You May Have Missed

error: Content is protected !!