ಎಮ್ಮೆಯ ಕರು ಮೇಲೆ ಕಾಮುಕನಿಂದ ಅತ್ಯಾಚಾರ; ಸಿಸಿಟಿವಿ ವಿಡಿಯೋ ನೋಡಿ ಬೆಚ್ಚಿಬಿದ್ದ ಮಾಲೀಕ

ಎಮ್ಮೆಯ ಕರು ಮೇಲೆ ಕಾಮುಕನಿಂದ ಅತ್ಯಾಚಾರ; ಸಿಸಿಟಿವಿ ವಿಡಿಯೋ ನೋಡಿ ಬೆಚ್ಚಿಬಿದ್ದ ಮಾಲೀಕ

ಕೊಟ್ಟಿಗೆಯಲ್ಲಿದ್ದ ಎಮ್ಮೆಯ ಕರುವಿನ ಮೇಲೆ 24 ವರ್ಷದ ಯುವಕನೊಬ್ಬ ಪದೇಪದೆ ಅತ್ಯಾಚಾರ ನಡೆಸಿರುವ ಆಘಾತಕಾರಿ ಘಟನೆಯೊಂದು ಮಹಾರಾಷ್ಟ್ರದ ಪುಣೆಯಲ್ಲಿ ನಡೆದಿದೆ. ಎಮ್ಮೆಯ ಪಕ್ಕದಲ್ಲಿ ಅದರ ಸಣ್ಣ ಕರುವನ್ನು ಕಟ್ಟಿಹಾಕಲಾಗಿತ್ತು. ಆ ಯುವಕ ಕೊಟ್ಟಿಗೆಗೆ ಬಂದು ಲೈಟ್ ಆಫ್ ಮಾಡಿ, ಆ ಕರುವಿನ ಮೇಲೆ ಲೈಂಗಿಕ ದೌರ್ಜನ್ಯ ನಡೆಸುವುದು ಅರೆಬರೆ ಬೆಳಕಿನಲ್ಲಿ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಪುಣೆಯ ಚಿಖಾಲಿ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಬಂಧಿಸಲಾಗಿದೆ. ಕೆಲವು ದಿನಗಳಿಂದ ಎಮ್ಮೆ ಕರುವಿನ ಆರೋಗ್ಯದಲ್ಲಿ ಏರುಪೇರಾಗಿತ್ತು. ಅದಕ್ಕೆ ರಕ್ತಸ್ರಾವವೂ ಆಗಿತ್ತು. ತಮ್ಮ ಮನೆಯ ಎಮ್ಮೆ ಕರುವಿನ ಮೇಲೆ ಯಾರೋ ಪದೇ ಪದೇ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಆರೋಪಿಸಿ ವ್ಯಕ್ತಿಯೊಬ್ಬರು ಕೇಸ್ ದಾಖಲಿಸಿದ್ದರು.

ಆದರೆ, ಅಷ್ಟರಲ್ಲಾಗಲೇ ಸಿಸಿಟಿವಿ ವಿಡಿಯೋವನ್ನು ಆ ಕರುವಿನ ಮಾಲೀಕರು ಪೊಲೀಸರಿಗೆ ನೀಡಿದ್ದರು. ಪುಣೆ ಜಿಲ್ಲೆಯ ಚಿಖಾಲಿ ಪ್ರದೇಶದಲ್ಲಿ ನೆಲೆಸಿರುವ ರಾಮಕಿಶನ್ ಚೌಹಾಣ್ ಎಂಬ 24 ವರ್ಷದ ಯುವಕ ಈ ಕೃತ್ಯ ಎಸಗಿದ್ದಾನೆ. ಸ್ಥಳೀಯರು ಸಲ್ಲಿಸಿದ ಸಾಕ್ಷ್ಯದ ಆಧಾರದ ಮೇಲೆ ಆತನನ್ನು ಬಂಧಿಸಲಾಗಿದೆ.

Leave a Reply

You May Have Missed

error: Content is protected !!