ಚಲಿಸುತ್ತಿದ್ದ ಬಸ್ ಹತ್ತಲು ಯತ್ನಿಸಿ ಬಿದ್ದು ಗಂಭೀರ ಗಾಯಗೊಂಡಿದ್ದ ವ್ಯಕ್ತಿ ಸಾವು

ಚಲಿಸುತ್ತಿದ್ದ ಬಸ್ ಹತ್ತಲು ಯತ್ನಿಸಿ ಬಿದ್ದು ಗಂಭೀರ ಗಾಯಗೊಂಡಿದ್ದ ವ್ಯಕ್ತಿ ಸಾವು

ಅರಂತೋಡು: ಚಲಿಸುತ್ತಿದ್ದ ಬಸ್ ಹತ್ತಲು ಯತ್ನಿಸಿ ವ್ಯಕ್ತಿಯೊಬ್ಬರು ರಸ್ತೆಗೆ ಎಸೆಯಲ್ಪಟ್ಡು ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಫಲಿಸದೆ ಸಾವನಪ್ಪಿರುವ ಬಗ್ಗೆ ವರದಿಯಾಗಿದೆ‌.

ಆಲೆಟ್ಟಿ ಗ್ರಾಮದ ಕೂಳಿಯಡ್ಕ ಕರುಣಾಕರ ಮೃತಪಟ್ಟ ದುರ್ದೈವಿ.
ಸುಳ್ಯ ಆಲೆಟ್ಟಿ ಕ್ರಾಸ್ ಬಳಿ ಆ.7ರ ಶನಿವಾರ ಸಂಜೆ ಖಾಸಗಿ ಬಸ್ ಹತ್ತಲು ಹೋದಾಗ ಬಸ್ಸಿನ ಬಾಗಿಲು ತಳ್ಳಲ್ಪಟ್ಟು ರಸ್ತೆಗೆ ಆಯತಪ್ಪಿ ಬಿದ್ದರೆನ್ನಲಾಗಿದೆ.

ಈ ಪರಿಣಾಮ ಗಂಭೀರ ಗಾಯಗೊಂಡ ಅವರನ್ನು ಸ್ಥಳೀಯರು ಚಿಕಿತ್ಸೆಗೆ ಸುಳ್ಯ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದರು. ಆ ಬಳಿಕ ಮನೆಯಲ್ಲೇ ಮರುದಿನ ಮುಂಜಾನೆ ಸಮಸ್ಯೆ ಉಲ್ಬಣವಾದ ಹಿನ್ನಲೆಯಲ್ಲಿ ಅವರನ್ನು ಚಿಕಿತ್ಸೆಗಾಗಿ ಮತ್ತೆ ಸುಳ್ಯ ಸರಕಾರಿ ಆಸ್ಪತ್ರೆಗೆ ಕರೆತರಲಾಯಿತು.

Previous post

ಸುಬ್ರಹ್ಮಣ್ಯ: ಮಾಜಿ ಪ್ರಧಾನಿ, ರಾಜ್ಯಸಭಾ ಸದಸ್ಯ ಹೆಚ್.ಡಿ.ದೇವೇಗೌಡ ಮತ್ತು ಅವರ ಪತ್ನಿ ಚಿನ್ನಮ್ಮ ಕುಕ್ಕೆ ಸುಬ್ರಹ್ಮಣ್ಯಕ್ಕೆ ಆಗಮಿಸಿದ್ದಾರೆ

Next post

ಕಬಡ್ಡಿ ಅಂಗಳದಲ್ಲಿ ತಂಡಗಳ ನಡುವೆ ಮಾರಾಮರಿ; ಕುರ್ಚಿಗಳು ಪುಡಿ ಪುಡಿ

Leave a Reply

You May Have Missed

error: Content is protected !!